Viral News: ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ ಯೋಚಿಸಿ, ಬರಿಗೈಯಲ್ಲಿ ವಾಪಸ್ ಆದ್ರೆ ಬೀಳುತ್ತೆ 500 ದಂಡ !

Latest news Viral News Think before going to the store because 500 fine if you return empty hand

Viral News: ಸಾಮಾನ್ಯವಾಗಿ ಅಂಗಡಿಗಳಿಗೆ ಗಿರಾಕಿಗಳು ಹೋದರೆ ವಸ್ತು ಕೊಳ್ಳೋದಕ್ಕಿಂತ ಮಾತೇ ಜಾಸ್ತಿ. ಕೆಲವರಂತೂ ಎಲ್ಲಾ ವಸ್ತುಗಳನ್ನು ಅದರ ಸ್ಥಳದಿಂದ ಹೊರದಬ್ಬಿ ಒಮ್ಮೆ ಕಣ್ಣಾಡಿಸಿ ಕೊನೆಗೆ ಬೇಡ ಎಂದು ಹೊರಟು ಬಿಡುತ್ತಾರೆ. ಆದರೆ, ಈ ಅಂಗಡಿಯಲ್ಲಿ ಹಾಗಲ್ಲ. ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ ಯೋಚಿಸ್ಬೇಕಾಗುತ್ತೆ, ಯಾಕಂದ್ರೆ ಅಂಗಡಿಗೆ ನುಗ್ಗಿ ಏನೂ ಕೊಳ್ಳದೆ ಬರಿಗೈಯಲ್ಲಿ ವಾಪಸ್ ಬಂದ್ರೆ 500 ದಂಡ ಬೀಳುತ್ತೆ!

ಸ್ಪೇನ್​ನ ಬಾರ್ಸಿಲೋನಾದಲ್ಲಿನ ಕಿರಾಣಿ ಅಂಗಡಿಯ ಮಾಲಿಕ ಕ್ವಿವಿಯರ್ಸ್ ಮುರ್ರಿಯಾ ಎಂಬ ವ್ಯಕ್ತಿ ತನ್ನ ಅಂಗಡಿ ಮುಂಭಾಗದಲ್ಲಿ
‘ಯಾರೇ ಬರಲಿ ನೋಡಲು ಬಂದರೂ 500 ರೂಪಾಯಿ ದಂಡ ತೆರಬೇಕಾಗುತ್ತದೆ’ ಎಂದು ಬರೆದಿರುವ ಸೂಚನಾ ಫಲಕದ ಫೋಟೋ ತೂಗುಹಾಕಿದ್ದಾನೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral News) ಆಗುತ್ತಿದೆ.

ಕ್ವಿವಿಯರ್ಸ್ ಕಿರಾಣಿ ಅಂಗಡಿಯನ್ನು 1898ರಲ್ಲಿ ಪ್ರಾರಂಭಿಸಿದ್ದಾನೆ. ಈ ಅಂಗಡಿಯನ್ನು ಚೆನ್ನಾಗಿ ಅಲಂಕರಿಸಲಾಗಿದೆ. ಪ್ರತಿ ವರ್ಷ ಈತನ ಅಂಗಡಿಯನ್ನು ನೋಡಲು ಜನರು, ಪ್ರವಾಸಿಗರು ಬರುತ್ತಾರೆ.
ಹೆಚ್ಚಿನವರು ಏನನ್ನೂ ಕೊಳ್ಳದೆ, ಅಂಗಡಿಯ ಒಳಭಾಗವನ್ನು ನೋಡಿ ನಂತರ ಹೊರಡುತ್ತಾರೆ. ಕೆಲವು ಜನರು ಪರಸ್ಪರ ಫೋಟೋ-ಸೆಲ್ಫಿ ತೆಗೆದುಕೊಂಡು ಅಲ್ಲಿಂದ ಹೊರಡುತ್ತಾರೆ. ಪ್ರಸ್ತುತ ಈ ಅಂಗಡಿಯನ್ನು ಟೋನಿ ಮರಿನೋ ನಡೆಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತ ಅಂಗಡಿಯವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಜನರು ಅಂಗಡಿಗೆ ಬಂದು ಏನೂ ಕೊಳ್ಳದೆ ಸುಮ್ಮನೆ ಹೋಗುತ್ತಿರುವುದಕ್ಕೆ ಕಡಿವಾಣ ಹಾಕಲು ದಂಡ ಫಿಕ್ಸ್ ಮಾಡಿದ್ದಾರೆ.
‘ನೋಡಲು ಮಾತ್ರ ಒಳಗೆ ಬರಬೇಕಾದರೆ 5 ಯೂರೋ (461 ರೂಪಾಯಿ) ಕೊಡಬೇಕು ಎಂದು ಬರೆದ ಬೋರ್ಡ್ ಅನ್ನು
ಅಂಗಡಿಯೊಳಗೆ ತೂಗುಹಾಕಿದ್ದಾರೆ. ಸದ್ಯ ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

 

ಇದನ್ನು ಓದಿ: Youtubers: ನೀವೂ ಯೂಟ್ಯೂಬ್‌ನಿಂದ ಹಣ ಗಳಿಸ್ತಿದ್ದೀರಾ ?! ಹಾಗಿದ್ರೆ ಕೂಡಲೇ ಈ ಕೆಲಸ ಮಾಡಿ. ಇಲ್ಲ ಅಪಾಯ ಕಟ್ಟಿಟ್ಟ ಬುತ್ತಿ!! 

Leave A Reply

Your email address will not be published.