2000 Note Exchange: 2 ಸಾವಿರ ರೂ. ನೋಟಿನ ಹೊಸ ಅಪ್ಡೇಟ್ ; ಈವರೆಗೆ ಎಷ್ಟು ಕೋಟಿ ಹಣ ಬ್ಯಾಂಕ್ ವಾಪಾಸ್ ಬಂದಿದೆ ಗೊತ್ತಾ?
Latest news 2000 Note Exchange News 2000 rs notes can be exchanged in banks
2000 Note Exchange News: 2000 ರೂ. ಮುಖಬೆಲೆಯ ನೋಟುಗಳನ್ನು (2000rps Notes) ಭಾರತೀಯ ರಿಸರ್ವ್ ಬ್ಯಾಂಕ್ (Reserve bank) ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ (September) 30ರವರೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ (2000 Note Exchange News) ಮಾಡಿಕೊಳ್ಳಬಹುದಾಗಿದೆ.
3. 62 ಲಕ್ಷ ಕೋಟಿ ಮೌಲ್ಯದ ಎರಡು ಸಾವಿರ ರೂಪಾಯಿ ನೋಟು (Note) ಚಲಾವಣೆಯಲ್ಲಿ ಇತ್ತು. ಇದರಲ್ಲಿ ಈವರೆಗೆ 2. 41 ಲಕ್ಷ ಕೋಟಿ ಮೌಲ್ಯದ ಹಣ ವಾಪಸ್ ಬ್ಯಾಂಕ್ ಗೆ ಬಂದಿದೆ. ಬಹುತೇಕರು ಬ್ಯಾಂಕ್ ಖಾತೆಯಲ್ಲಿ 2 ಸಾವಿರ ರೂಪಾಯಿ ನೋಟನ್ನು ಜಮಾ ಮಾಡಿದ್ದಾರೆ. ಉಳಿದವರು ಬದಲಿ ನೋಟು ಪಡೆದಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆ ಪ್ರಕಾರ, 2 ಸಾವಿರ ರೂಪಾಯಿ ನೋಟುಗಳ ಮೇಲೆ ನಿಷೇಧ ಹೇರಿರುವ ಕಾರಣ ಭಾರತದ ಆರ್ಥಿಕ ಬೆಳವಣಿಗೆ ಶೇಕಡಾ 6.5ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
2016ರ ನವೆಂಬರ್ ನಲ್ಲಿ 2000 ರೂ. ನೋಟು ಚಲಾವಣೆಗೆ ತರಲಾಗಿತ್ತು. 2018 ರಲ್ಲಿ 2000 ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು. ಭಾರೀ ಹಗರಣ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಸದ್ಯ 2000 ನೋಟು ಚಲಾವಣೆ ಸ್ಥಗಿತಗೊಂಡಿದೆ. ಜೊತೆಗೆ ಹಣ ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಉಚಿತವಾಗಿಯೇ ಸೌಲಭ್ಯ ಪಡೆದುಕೊಳ್ಳಬಹುದು. ಒಂದು ಬಾರಿ 20 ಸಾವಿರ ರೂಪಾಯಿ ಮೌಲ್ಯದ ನೋಟನ್ನು ಬದಲಿಸಬಹುದು.
ಅಕೌಂಟ್ ಇಲ್ಲದೇ ಇದ್ದರೂ ಯಾವುದೇ ಬ್ಯಾಂಕಿನಲ್ಲಿ ಗರಿಷ್ಠ ಒಂದು ದಿನದಲ್ಲಿ 20 ಸಾವಿರ ರೂ. ಹಣವನ್ನು ಬದಲಿಸಿಕೊಳ್ಳಬಹುದು. ಆರ್ಬಿಐ 19 ಪ್ರಾದೇಶಿಕ ಕಚೇರಿಗಳಲ್ಲಿ ನೋಟ್ ಬದಲಾವಣೆಗೆ ಅವಕಾಶವಿದೆ. 20 ಸಾವಿರ ರೂ.ಗಿಂತಲೂ ಜಾಸ್ತಿ ಹಣ ಇದ್ದರೂ ಯಾವುದೇ ಸಮಸ್ಯೆ ಇಲ್ಲ. ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಠೇವಣಿ ಇಡಬಹುದು. ಠೇವಣಿಗೆ ಯಾವುದೇ ಮಿತಿಯನ್ನು ಹೇರಿಲ್ಲ. ಆದರೆ ಕೆವೈಸಿ ಮತ್ತು ಇತರೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ 2019ರ ಜನವರಿಯಲ್ಲಿ ಮಾಹಿತಿ ನೀಡಿತ್ತು. ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ 2000 ರೂ. ಚಲಾವಣೆಗೆ ತಂದಿತ್ತು.