ಶನಿವಾರ, 24 ಅಕ್ಟೋಬರ್ 2026

Cat: ದಾರಿಯಲ್ಲಿ ಬೆಕ್ಕು ಅಡ್ಡಬಂದರೆ ನಿಜವಾಗಲೂ ಅಪಶಕುನವೇ! ಇದಕ್ಕೆ ಕಾರಣವೇನು ಗೊತ್ತಾ!

ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಬಹುತೇಕರು ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಕೆಲವೆಡೆ ಬೆಕ್ಕನ್ನು (cat ) ಮಂಗಳಕರ ಎಂದು ಪರಿಗಣಿಸುತ್ತಾರೆ.

Cat
Image source: Kannada news

Cat: ಪ್ರಾಣಿಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚಾಗಿ ಬೆಕ್ಕುಗಳು ನಮ್ಮ ದಾರಿಗೆ ಅಡ್ಡ ಬಂದರೆ ಬಹುತೇಕರು ಅದನ್ನು ಅಶುಭ ಸಂದರ್ಭವೆಂದು ಪರಿಗಣಿಸುತ್ತೇವೆ. ಕೆಲವೆಡೆ ಬೆಕ್ಕನ್ನು (cat ) ಮಂಗಳಕರ ಎಂದು ಪರಿಗಣಿಸುತ್ತಾರೆ.

ಬೆಕ್ಕು ದಾರಿಯಲ್ಲಿ ಅಡ್ಡಬಂದರೆ ಅನೇಕ ಜನರು ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ. ಅದರಲ್ಲೂ ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಆದರೆ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ.

ಬೆಕ್ಕನ್ನು ಅಶುಭವೆಂದು ಪರಿಗಣಿಸಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಆದರೆ ಕಪ್ಪು ಬೆಕ್ಕನ್ನು ಕೆಟ್ಟ ಶಕುನವೆಂದು ಪರಿಗಣಿಸುವ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಬಿಳಿ ಬೆಕ್ಕಿನ ಬಗ್ಗೆ ಶಕುನಗಳು ಮತ್ತು ಕೆಟ್ಟ ಶಕುನಗಳು ಪ್ರಚಲಿತದಲ್ಲಿವೆ.

ರಸ್ತೆ ದಾಟುವಾಗ ನಿಲ್ಲುವ ವಿಷಯಕ್ಕೆ ಸಂಬಂಧಿಸಿದಂತೆ, ಈ ಸಂಪ್ರದಾಯವನ್ನು ರಾತ್ರಿಯ ಸಮಯಕ್ಕೆ ಪ್ರಾರಂಭಿಸಲಾಗಿದೆ. ನಿಜ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ಕರೆಂಟು ಇರುತ್ತಿರಲಿಲ್ಲ. ಆ ಸಮಯದಲ್ಲಿ ದಾರಿಯಲ್ಲಿ ಯಾವುದಾದರೂ ಸದ್ದು ಬಂದಾಗ ಜನರು ನಿಲ್ಲುತ್ತಿದ್ದರು. ಇದರಿಂದ ಕಾಡುಪ್ರಾಣಿಗಳು ರಸ್ತೆ ದಾಟಿದರೆ ಆರಾಮವಾಗಿ ರಸ್ತೆ ದಾಟಬಹುದಿತ್ತು. ಅವುಗಳು ನಮಗೆ ಹಾನಿ ಮಾಡಬಾರದು ಮತ್ತು ನಮ್ಮಿಂದ ಅವುಗಳಿಗೆ ಹಾನಿಯಾಗಬಾರದು ಎಂಬ ಉದ್ದೇಶ ಅಲ್ಲಿತ್ತು. ಕ್ರಮೇಣ ಈ ಸಂಪ್ರದಾಯವು ಕಪ್ಪು ಬೆಕ್ಕಿಗೆ ಅಪಶಕುನ, ಮೂಢನಂಬಿಕೆಗೆ ಸಂಪರ್ಕ ಪಡೆದುಕೊಂಡಿತು.

ಬೆಕ್ಕು ಅಡ್ಡ ಬಂದಾಗ ನಿಲ್ಲಬೇಕು ಎಂಬ ಮೂಢನಂಬಿಕೆಯ ಬಗ್ಗೆ ಮಾತನಾಡುವುದಾದರೆ, ಈ ಪ್ರವೃತ್ತಿಯ ಪ್ರಾರಂಭದ ಹಿಂದೆ ವಿಶೇಷ ಕಾರಣವಿದೆ. ದಶಕಗಳ ಹಿಂದೆ ಪ್ಲೇಗ್ ರೋಗವು ಹೆಚ್ಚಾಗಿ ಹರಡಿತು. ಈ ಸಾಂಕ್ರಾಮಿಕ ರೋಗದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು.

ಬೆಕ್ಕಿನ ಮುಖ್ಯ ಆಹಾರ ಇಲಿ. ಇಂತಹ ಪರಿಸ್ಥಿತಿಯಲ್ಲಿ ಬೆಕ್ಕಿನ ಮೂಲಕ ಜನರಲ್ಲಿ ಈ ಸೋಂಕು ಹರಡುವ ಸಾಧ್ಯತೆ ಇತ್ತು. ಇದೇ ಕಾರಣದಿಂದ ಬೆಕ್ಕಿನಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಯಿತು.

ಇದನ್ನೂ ಓದಿ: ವಿಜಯ್‌ ದೇವರಕೊಂಡಗೆ ನಾಯಕಿಯಾದ ಮೃಣಾಲ್‌! ರಶ್ಮಿಕಾ ಬದಲಿಗೆ ಜೋಡಿಯಾದ ʼಸೀತಾರಾಮಂʼ ಖ್ಯಾತಿಯ ನಟಿ!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ