Sienna Weir: ಕುದುರೆ ಸವಾರಿ ವೇಳೆ ಅಪಘಾತ! 2022 ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ʻಸಿಯೆನ್ನಾ ವೀರ್ʼ ಇನ್ನಿಲ್ಲ!

Miss Universe 2022 finalist Sienna Weir is no more!

Sienna Weir: 2022 ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು ಆಸ್ಟ್ರೇಲಿಯನ್ ಫ್ಯಾಷನ್ ಮಾಡೆಲ್ ಸಿಯೆನ್ನಾ ವೀರ್(Sienna Weir) ಕೇವಲ 23ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡಿದ್ದಾರೆ.

ಏಪ್ರಿಲ್ 2 ರಂದು ಸಿಯೆನ್ನಾ ವೀರ್ ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ತನ್ನ ಮೆಚ್ಚಿನ ಹವ್ಯಾಸದಲ್ಲಿ ಒಂದಾಗಿರುವ ಕುದುರೆ ಸವಾರಿಯನ್ನು ಮಾಡುತ್ತಿದ್ದ ವೇಳೆ, ಕುದುರೆ ಇದ್ದಕ್ಕಿದ್ದಂತೇ ಕೆಳಕ್ಕೆ ಬಿದ್ದಿತ್ತು. ಆ ಸಮಯದಲ್ಲಿ ಗಂಭೀರ ಸ್ವರೂಪದ ಗಾಯಗೊಂಡಿದ್ದ ಅವರನ್ನು ವೆಂಟಿಲೇಟರ್‌ ನಲ್ಲಿ ಇಟ್ಟು ಹಲವು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಹಲವು ದಿನಗಳಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕೃತಕ ಉಸಿರಾಟದ ನೆರವನ್ನು ( ಮೇ. 4 ರಂದು) ತೆಗೆಯಲು ಹೇಳಿದ್ದು, ಇದೀಗ ನಟಿಯ ಮಾಡೆಲಿಂಗ್ ಏಜೆನ್ಸಿ ಸ್ಕೂಲ್ ಮ್ಯಾನೇಜ್‌ಮೆಂಟ್ ಅವರ ಸಾವನ್ನು ಖಚಿತಪಡಿಸಿದೆ. ಮತ್ತು ಅವರು ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತಾರೆ ಎಂಬ ಶೀರ್ಷಿಕೆಯೊಂದಿಗೆ ಅವರ ಹಲವಾರು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಸಿಯೆನ್ನಾ ವೀರ್ 2022 ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ ಸಿಯೆನ್ನಾ ವೀರ್ ಒಬ್ಬರಾಗಿದ್ದರು.ಅದಲ್ಲದೆ ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದ ಖ್ಯಾತಿ ಹೊಂದಿದ್ದಾರೆ.

ಇದನ್ನೂ ಓದಿ:  BECIL ನಲ್ಲಿ ಉದ್ಯೋಗವಕಾಶ! ಪಿಯುಸಿ ಪಾಸಾದವರಿಗೂ ಕೆಲಸ, ಮಾಸಿಕ ರೂ.30,000 ಸಂಬಳ!

Leave A Reply

Your email address will not be published.