A girls romance on a moving bike : ಚಲಿಸುವ ಬೈಕ್ ಮೇಲೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಲಿಪ್​ಲಾಕ್​ ​​ಮಾಡಿದ ಹುಡುಗಿಯರು! ವೈರಲ್ ಆಯ್ತು ರೊಮ್ಯಾನ್ಸ್ ವಿಡಿಯೋ!

A girls romance on a moving bike

A girls romance on a moving bike: ಇತ್ತೀಚಿನ ದಿನಗಳಲ್ಲಿ ಸ್ಟಂಟ್(Stant) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ವಿಚಿತ್ರ ಎನ್ನುವಂತೆ ಹುಡುಗ ಹುಡುಗಿ ರೊಮ್ಯಾನ್ಸ್ ಮಾಡುತ್ತ, ಎದುರು ಬದುರು ಕುಳಿತು ತಬ್ಬಿ ಮುತ್ತಿಕ್ಕುತ್ತಾ, ಅಮಲಿನಲ್ಲಿ ಬೈಕ್ ಓಡಿಸೋದನ್ನು ನಾವು ಕೇಳಿ, ನೋಡಿ ಅಚ್ಚರಿ ಪಟ್ಟಿದ್ದೆವು. ಆದರೆ ಇಲ್ಲೊಂದೆಡೆ ಬೈಕ್​ ಮೇಲೆ ಕುಳಿತ ಇಬ್ಬರು ಹುಡುಗಿಯರು ಒಬ್ಬರನ್ನೊಬ್ಬರು ತಬ್ಬಿಕೊಂಡು, ತುಟಿಗೆ ತುಟಿಯಿಟ್ಟು ಚುಂಬಿಸುತ್ತಿರೋ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ( A girls romance on a moving bike) ಭಾರೀ ವೈರಲ್​ ಆಗುತ್ತಿದೆ.

ಹೌದು, ಸಲಿಂಗಿ(lesbianl ಜೋಡಿಗಳ ವಿವಾಹದ ಬಗ್ಗೆ ಸುಪ್ರೀಂಕೋರ್ಟ್‌(supreme court) ನಲ್ಲಿ ಬಹುದಿನಗಳಿಂದ ನಿರಂತರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚಲಿಸುವ ಬೈಕ್‌(Baik) ಮೇಲೆ ಕುಳಿತು ಬಾಲಕಿಯರಿಬ್ಬರು ಲಿಪ್ ಕಿಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ. ಜಾರ್ಖಂಡ್‌ನ ಸ್ಟಾರ್ಸ್(Jharkhand Stars)ಎಂಬ ಇನ್‌ಸ್ಟಾಗ್ರಾಮ್(Instagram) ಖಾತೆಯಿಂದ ಹಂಚಿಕೊಂಡ ಈ ಬೈಕ್ ಸ್ಟಂಟ್ ಕ್ಲಿಪ್ ನೋಡಿ ನೆಟ್ಟಿಗರೆಲ್ಲರೂ ಶಾಕ್ ಆಗಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಪ್ರಸ್ತುತ ಡಿಲೀಟ್ ಆಗಿರುವ ವಿಡಿಯೋದಲ್ಲಿ ಹೆಲ್ಮೆಟ್ ಧರಿಸದ ಈ ಹುಡುಗಿಯರು ತಮಿಳುನಾಡು(Tamilunad) ನೋಂದಣಿಯ ಸ್ಲೆಂಡರ್ ಬೈಕ್(Spender Bike) ಮೇಲೆ ಕುಳಿತು ಪರಸ್ಪರ ಕೈಗೆ ಹೊಡೆದುಕೊಂಡು ಹೈಫೈ ಮಾಡಿ ಮೊದಲು ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ನಂತರ ಇಬ್ಬರು ಮುತ್ತಿಟ್ಟುಕೊಳ್ಳುತ್ತಾರೆ. ಈ ವೇಳೆ ಅವರಿಬ್ಬರು ಬೈಕ್​​ ಹ್ಯಾಂಡ್​​ ಹಿಡಿಯದೆ ಬ್ಯಾಲೆನ್ಸ್​​ ಮಾಡುತ್ತಾ ಬೈಕ್​​ ಚಲಾಯಿಸುತ್ತಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಪರಿಚಿತ ಯುವತಿಯರ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಈ ವಿಡಿಯೋ ತಮಿಳುನಾಡಿನದ್ದು ಎನ್ನಲಾಗುತ್ತಿದ್ದು, ಈ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಒಂದೇ ಲಿಂಗದ ಜೋಡಿಯ ಪ್ರೀತಿಯ ಸಾರ್ವಜನಿಕ ಪ್ರದರ್ಶನ (public display of affection of a same-sex couple) ಎನ್ನಲಾಗುತ್ತಿದೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಅಂದಹಾಗೆ ಕಳೆದ ವಾರವಷ್ಟೇ, ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ, ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ತನ್ನ ಗೆಳತಿಯೊಂದಿಗೆ ಇಂತಹ ಅಪಾಯಕಾರಿ ಸಾಹಸ ಮಾಡಿರುವ ವಿಡಿಯೋ ಕೂಡಾ ವೈರಲ್​​ ಆಗಿತ್ತು.

Leave A Reply

Your email address will not be published.