Rocking Star Yash: ಏಪ್ರಿಲ್-14 ನಟ ಯಶ್‌ ಗೆ ಸ್ಪೆಷಲ್ ! ಯಾಕೆಂದು ತಿಳಿದರೆ ಖಂಡಿತ ಖುಷಿ ಪಡ್ತೀರ!

Rocking Star Yash: KGF ಫ್ರಾಂಚೈಸಿಯೊಂದಿಗೆ ರಾಕಿಂಗ್ ಸ್ಟಾರ್ ಯಶ್ ( Rocking Star Yash)ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಫೇಮಸ್ ಆಗಿದ್ದು ಮಾತ್ರವಲ್ಲ KGF ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಮತ್ತು ಇತರ ಭಾಷೆಗಳಲ್ಲಿ ಯಶ್ ಮಾರುಕಟ್ಟೆಯಲ್ಲಿ ಭಾರೀ ಹವಾ ಸೃಷ್ಟಿ ಮಾಡಿದ್ದಾರೆ. ಕೆಜಿಎಫ್ 2(KGF – 2), ಕಾಂತಾರ, ವಿಕ್ರಾಂತ್ ರೋಣ ಮತ್ತು 777 ಚಾರ್ಲಿಯಂತಹ ಚಲನಚಿತ್ರಗಳ ಪ್ಯಾನ್-ಇಂಡಿಯಾ ಯಶಸ್ಸಿನ ಬಳಿಕ, ಕನ್ನಡ ಚಲನಚಿತ್ರೋದ್ಯಮವು (Sandalwood)ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎಂಬುದು ಸುಳ್ಳಲ್ಲ. ಸ್ಯಾಂಡಲ್ ವುಡ್ ದುನಿಯಾದಲ್ಲಿ ಯಶ್ ಅವರಿಗೆ ಎಪ್ರಿಲ್ 14 ವಿಶೇಷ ಅನ್ನೋದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ರಾಕಿ ಭಾಯ್ಗೆ ಏಪ್ರಿಲ್-14 ಯಾಕೆ ಮಹತ್ವದ ದಿನ ಯಾಕೆ ಗೊತ್ತಾ? ಇದಕ್ಕೆ ನಾವು ಉತ್ತರ ಹೇಳ್ತೀವಿ ಕೇಳಿ! ರಾಕಿಂಗ್ ಸ್ಟಾರ್ ಯಶ್ ಚಿತ್ರ ಜೀವನದ ಕೆಜಿಎಫ್ ಸಿನಿಮಾ ದೊಡ್ದ ಮಟ್ಟದ ಟ್ರೆಂಡ್ ಸೃಷ್ಟಿ ಮಾಡಿತ್ತು. ಸಿನಿಮಾ ಬಂದು ಹೆಚ್ಚು ಕಡಿಮೆ ಐದು ವರ್ಷಗಳೇ ಕಳೆದಿದ್ದರು ಕೂಡ ಈ ಚಿತ್ರದ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ ಅನ್ನೋದು ವಿಶೇಷ.

ರಾಕಿಂಗ್ ಸ್ಟಾರ್ ಯಶ್ ಅವರ ಪಾಲಿಗೆ ದೊಡ್ಡ ಮಟ್ಟದ ನೇಮ್ ಫೇಮ್ ತಂದುಕೊಟ್ಟಿದ್ದು ಕೆಜಿಎಫ್ ಸಿನಿಮಾ ಎಂದರೇ ತಪ್ಪಾಗದು. (KGF-2 Movies Updates) ಕೆಜಿಎಫ್ ಸಿನಿಮಾ ತೆರೆ ಕಾಣದೇ ಇದ್ದರೆ, ರಾಕಿ ಭಾಯ್ ಅನ್ನೋ ಹೆಸರು ಪ್ರಪಂಚಾದ್ಯಂತ ಪ್ರಖ್ಯಾತಿ ಪಡೆಯಲು(Yash Kannada Super Hit Movie) ಸಾಧ್ಯವೇ ಇರುತ್ತಿರಲಿಲ್ಲ ವೇನೋ! ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ (Rocking Star Yash Cinema) ಟ್ರೆಂಡ್ ಸೃಷ್ಟಿ ಮಾಡಿದ್ದು, ಯಶ್ ಅವರ ಸತತ ಪ್ರಯತ್ನದ ಪ್ರತಿಫಲವಾಗಿ,ಕೆಜಿಎಫ್-2 ಸಿನಿಮಾ ಬಂದ್ಮೇಲೆ ಅದರ (KGF-2 Movie Untold Story) ಖದರ್ ಜೋರಾಗಿ ಸದ್ದು ಮಾಡಿದೆ.

ಕೆಜಿಎಫ್ ಸಿನಿಮಾ ಭರ್ಜರಿ ಗೆಲುವು ಸಾಧಿಸಿದ ಬಳಿಕ ಕೆಜಿಎಫ್ ಭಾಗ ಎರಡರ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರಕ್ಕೆ ಚಿತ್ರ ನಿರ್ಮಾಣ ಸಂಸ್ಥೆ ಬರೋಬ್ಬರಿ 100 ಕೋಟಿಯಷ್ಟು ಖರ್ಚು ಮಾಡಲಾಗಿತ್ತು. ಕೆಜಿಎಫ್-2 ಸಿನಿಮಾ ಏಪ್ರಿಲ್ ತಿಂಗಳ 14ನೇ ತಾರೀಖಿನಂದು ಎಲ್ಲೆಡೆ ರಿಲೀಸ್ ಆಗಿತ್ತು. ಹೀಗಾಗಿ, ಈ ದಿನ ಯಶ್ ಪಾಲಿಗೆ ದೊಡ್ಡ ಯಶಸ್ಸು ತಂದುಕೊಟ್ಟ ದಿನ ಎಂದರೂ ತಪ್ಪಾಗಲಾರದು.ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಮೂಲಕ ಕನ್ನಡ ನಾಡಿನ ರಾಕಿ ಭಾಯ್ ಎಲ್ಲೆಡೆ ಖ್ಯಾತಿ ಪಡೆಯಲು ಅವಕಾಶ ದೊರೆಯಿತು. ಸದ್ಯ, ರಾಕಿಂಗ್ ಸ್ಟಾರ್ ಯಶ್ ತಮ್ಮ ಚಿತ್ರ ಜೀವನದ 19 ನೇ ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.

2018 ರಲ್ಲಿ ಕೆಜಿಎಫ್ ಮೂಲಕ ರಾಕಿ ಭಾಯ್ ಅನ್ನೋ ಪಾತ್ರ ಎಲ್ಲೆಡೆ ಮೋಡಿ ಮಾಡಿದ್ದು ಗೊತ್ತೇ ಇದೆ. ಕೆಜಿಎಫ್ ಸಿನಿಮಾದ ಮೊದಲ ಭಾಗ ಹುಟ್ಟು ಹಾಕಿದ ಕ್ರೇಜ್ ಕೆಜಿಎಫ್-2 ಬರುವವರೆಗೆ ಇತ್ತು ಅನ್ನೋದೆ ವಿಶೇಷ. ಈ ಕೆಜಿಎಫ್ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಅಬ್ಬರಿಸಿ, ಪಾಕಿಸ್ತಾನದಲ್ಲೂ ಈ ಚಿತ್ರ ರಿಲೀಸ್ ಆಗಿ ಹೊಸ ದಾಖಲೆಯನ್ನ ಹುಟ್ಟು ಹಾಕಿತ್ತು. ಕೋಟಿ ಕೋಟಿ ಬಜೆಟ್ನ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಕಮಾಯಿ ಮಾಡಿದ್ದು ಅಲ್ಲದೇ ಅನೇಕ ದಾಖಲೆಗಳನ್ನು ಬರೆದಿರುವುದು ವಿಶೇಷ.ಏಪ್ರಿಲ್-14 ರಂದು ತಮ್ಮ ಮುಂದಿನ ಚಿತ್ರದ ಅನೌನ್ಸ್ಮೆಂಟ್ (New Movie Announcement)ಮಾಡಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Leave A Reply

Your email address will not be published.