Electric Cooker : ಮಹಿಳೆಯರೇ ಗ್ಯಾಸ್ ಚಿಂತೆ ಬಿಡಿ! ಬಂತು ನೋಡಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕುಕ್ಕರ್

Electric Cooker : ಅಡುಗೆ ಮನೆಯ ಕೆಲಸವನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು  ಎಲೆಕ್ಟ್ರಿಕ್ ಕುಕ್ಕರ್(electric  cooker )ಬಂದಿದೆ ನೋಡಿ. ಈ ಎಲೆಕ್ಟ್ರಿಕ್ ಕುಕ್ಕರ್ ಉತ್ತಮ ಕ್ವಾಲಿಟಿ, ಆಹಾರವನ್ನು ಬೆಚ್ಚಗಿಡುವ ಸಾಮರ್ಥ್ಯ, ಕಡಿಮೆ ಅವಧಿಯಲ್ಲಿ ಆಹಾರ ತಯಾರಾಗುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಈ ಕುಕ್ಕರನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಅಮೆಜಾನ್ ನಿಮಗೆ ಉತ್ತಮ ರಿಯಾಯಿತಿ ಸಹ ನೀಡುತ್ತಿದೆ. ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

 

ಈ ಎಲೆಕ್ಟ್ರಿಕ್ ಕುಕ್ಕರ್  ಕೆಂಟ್ ಕಂಪೆನಿಯಿಂದ ತಯಾರಿಸಲ್ಪಟ್ಟ ಸ್ಮಾರ್ಟ್ ಮಲ್ಟಿ ಕುಕ್ಕರ್ ಆಗಿದೆ. ಇದು ಕೆಟಲ್ಸ್‌ನಂತೆಯೂ ಕೆಲಸ ಮಾಡುತ್ತದೆ ಎಂದು ಕಂಪೆನಿ ತಿಳಿಸಿದ್ದು,

ಇದು 1.2 ಲೀಟರ್ ಸಾಮರ್ಥ್ಯದ ಕುಕ್ಕರ್ ಆಗಿದೆ. ಇದು 800 ವ್ಯಾಟ್ ಶಕ್ತಿಯನ್ನು ಬಳಸುತ್ತದೆ. ಈ ಸ್ಮಾರ್ಟ್ ಕುಕ್ಕರ್ ಮೂಲಕ ಯಾವುದೇ ಅಡುಗೆ ಮಾಡಬಹುದು. ಇದು ಆಟೋಮ್ಯಾಟಿಕ್ ಆಗಿ ಸ್ವಿಚ್ ಆಫ್ ಆಗುವ ಫೀಚರ್ ಅನ್ನೂ ಹೊಂದಿದ್ದು ಆಕರ್ಷಕ ಲುಕ್ ಹೊಂದಿದೆ.

 

ಅದಲ್ಲದೆ ಅಡುಗೆ ಮಾಡುವಾಗ ಈ ಕುಕ್ಕರ್ ಅನ್ನು ಹಿಡಿದಿಡಲು ತಂಪಾದ ಟಚ್ ಹ್ಯಾಂಡಲ್ ಅನ್ನು ನೀಡಲಾಗಿದೆ. ಈ ಕುಕ್ಕರ್ 25 ಸೆಂ.ಮೀ ಉದ್ದ 20 ಸೆಂ.ಮೀ ಅಗಲ ಮತ್ತು 22 ಸೆಂ.ಮೀ ಎತ್ತರವನ್ನು ಹೊಂದಿದೆ. ಇದರ ತೂಕ ಕೇವಲ 1 ಕೆಜಿ 360 ಗ್ರಾಂ. ಇದು 1 ವರ್ಷದ ವ್ಯಾರಂಟಿಯೊಂದಿಗೆ ಬರುತ್ತದೆ.

 

ಈ ಕುಕ್ಕರ್ ಸಣ್ಣ ಕುಟುಂಬಗಳು, ಬ್ಯಾಚುಲರ್‌ಗಳು ಮತ್ತು ಪ್ರಯಾಣಿಕರಿಗೆ ಹೇಳಿ ಮಾಡಿಸಿದಂತೆ ಇದೆ. ಇನ್ನು  ಹಾಸ್ಟೆಲ್ ನಲ್ಲಿ ಇರುವವರಿಗೆ ಸುಲಭವಾಗಿ ಅಡುಗೆ ತಯಾರಿ ಮಾಡಬಹುದು.  ಇದರ ವಿಶೇಷ ಫೀಚರ್ ಏನೆಂದರೆ ಈ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಹವಾಮಾನ ಬದಲಾವಣೆಯಾದರೆ, ಕುಕ್ಕರ್ ಸ್ವತಃ ಅದರ ತಾಪಮಾನವನ್ನು ಬದಲಾಯಿಸುತ್ತದೆ.

 

ನೀವು ಈ ಕುಕ್ಕರ್ ಅನ್ನು ಯಾರಿಗಾದರೂ ಉಡುಗೊರೆಯಾಗಿ ಸಹ ನೀಡಬಹುದು. ಇದು ಸ್ಮಾರ್ಟ್ ಕುಕ್ಕರ್ ಆಗಿರುವುದರಿಂದ ಅದರಲ್ಲಿ ಅಡುಗೆ ಮಾಡುವುದು ತುಂಬಾ ಸುಲಭ ಮತ್ತು ಅನುಕೂಲವಾಗಲಿದೆ.

 

ಈ ಕುಕ್ಕರ್‌ನ ಮೂಲ ಬೆಲೆ ರೂ.2,900 ಆಗಿದ್ದರೆ, ಅಮೆಜಾನ್ ಇದನ್ನು ಶೇ.45 ರಿಯಾಯಿತಿಯೊಂದಿಗೆ ಕೇವಲ ರೂ.1,599ಕ್ಕೆ ಮಾರಾಟ ಮಾಡುತ್ತಿದೆ.

 

ಈ ಕುಕ್ಕರ್ ನಲ್ಲಿ ಅನ್ನದೊಂದಿಗೆ ಮೊಟ್ಟೆ, ಇಡ್ಲಿ, ನೂಡಲ್ಸ್, ಮೊಮೊಸ್, ತರಕಾರಿಗಳನ್ನು ಸಹ ಬೇಯಿಸಬಹುದು. ಈ ಕುಕ್ಕರ್ ಮೂಲಕ ಒಂದು ಬಾರಿಗೆ 12 ಇಡ್ಲಿಗಳನ್ನು ಬೇಯಿಸಬಹುದು. ಹಾಗೆಯೇ 6 ಮೊಟ್ಟೆಗಳನ್ನು ಸಹ ಬೇಯಿಸಬಹುದು. ಈ ಕುಕ್ಕರ್ ಒಳಗೆ ಸ್ಟೇನ್ಸೆಸ್ ಸ್ಟೀಲ್ ಇದೆ. ಹಾಗಾಗಿ ಇದನ್ನು ಬಳಕೆ ಮಾಡುವುದು ಸುಲಭ ಎಂದು ಕಂಪೆನಿ ಭರವಸೆ ನೀಡಿದೆ.

Leave A Reply

Your email address will not be published.