Best Smartwatches: ಬಜೆಟ್ ಬೆಲೆಯಲ್ಲಿ ಕೊಂಡು ಕೊಳ್ಳಬಹುದಾದ ಬೆಸ್ಟ್ ಸ್ಮಾರ್ಟ್ ವಾಚ್ಗಳಿವು!!

Best Smartwatches: ಇಂದು ಮಾರುಕಟ್ಟೆಯಲ್ಲಿ ಹೊಸ ಹೊಸ ವೈಶಿಷ್ಟ್ಯದ ಸ್ಮಾರ್ಟ್ ವಾಚ್( Smart Watch) ಲಗ್ಗೆ ಇಟ್ಟಿದ್ದು, ಹೀಗಾಗಿ, ಎಲ್ಲಿಲ್ಲದ ಬೇಡಿಕೆಯನ್ನೂ ಸೃಷ್ಟಿ ಮಾಡಿಕೊಂಡಿದೆ. ಚಿಕ್ಕವರಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ ವಾಚ್ ಕೊಂಡುಕೊಳ್ಳುವ ಕ್ರೇಜ್ ಸಾಮಾನ್ಯವಾಗಿ ಬಿಟ್ಟಿದೆ. ಹಾಗಿದ್ದರೆ, ಬಜೆಟ್ ಬೆಲೆಯಲ್ಲಿ 3000ದ ಒಳಗೆ ಕೊಂಡುಕೊಳ್ಳಬಹುದಾದ ಬೆಸ್ಟ್ ಸ್ಮಾರ್ಟ್(Best Smartwatches) ವಾಚ್ ಗಳು ಯಾವುದೆಲ್ಲ ಎಂಬ ಮಾಹಿತಿ ನಿಮಗಾಗಿ.

ಬೋಟ್​ ವೇವ್​ ಲೈಟ್​​ ಸ್ಮಾರ್ಟ್​ವಾಚ್​(boAt wave Light smart Watch) ಈ ಸ್ಮಾರ್ಟ್​​​ವಾಚ್​ ಉತ್ತಮ ಡಿಸ್​​ಪ್ಲೇ ಜೊತೆಗೆ 140+ ವಾಚ್​​ಫೇಸ್​​ಗಳನ್ನು ಮತ್ತು ಆಯಕ್ಟಿವಿಟಿ ಟ್ರ್ಯಾಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್​ವಾಚ್​ ಫಿಟ್ನೆಸ್​ ಬಯಸುವ ಮಂದಿಗೆ ಒಳ್ಳೆಯ ಆಯ್ಕೆಯಾಗಿದೆ. ಈ ಸ್ಮಾರ್ಟ್​ವಾಚ್​​ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹಲವಾರು ಸ್ಪೋರ್ಟ್ಸ್​​ ಮೋಡ್​​ಗಳು, 7-ದಿನದ ಬ್ಯಾಟರಿ ಬ್ಯಾಕಪ್​ ಮತ್ತು ಹೃದಯ ಬಡಿತ ಮಾನಿಟರ್ ಗಳನ್ನ ಕೂಡ ಈ ಸ್ಮಾರ್ಟ್ ವಾಚ್ ಮೂಲಕ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಬೆಲೆ ಎಷ್ಟು ಎಂದು ಗಮನಿಸಿದರೆ, ರೂ.1,499 ಆಗಿದೆ.

ಬೋಟ್​ ವೇವ್​ ಕಾಲ್ ಸ್ಮಾರ್ಟ್​​ವಾಚ್(boat wave call smartwatch)
ಬೋಟ್​ ಕಂಪೆನಿಯ ಈ ಸ್ಮಾರ್ಟ್​​ವಾಚ್ ಬ್ಲೂಟೂತ್ ವಾಯ್ಸ್​ ಕಾಲ್​ ಫೀಚರ್​ ಅನ್ನು ಹೊಂದಿದೆ. ಇದರ ಜೊತೆಗೆ ಸ್ಪೋರ್ಟ್ಸ್​ ಮೋಡ್​ಗಳನ್ನು ಕೂಡ ಒಳಗೊಂಡಿದ್ದು, ಈ ಸ್ಮಾರ್ಟ್ ವಾಚ್ 1.69 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಮಾರುಕಟ್ಟೆಯಲ್ಲಿ ಕೇವಲ 1,799 ರೂಪಾಯಿಯಲ್ಲಿ ಖರೀದಿಗೆ ಲಭ್ಯವಿದೆ.

ಬೋಟ್​ ಫ್ಲ್ಯಾಶ್​ ಸ್ಮಾರ್ಟ್​​​ವಾಚ್(boat flash smart watch)
ಫಿಟ್ನೆಸ್​ ಸ್ಮಾರ್ಟ್​​ವಾಚ್​ ಅನ್ನು ಕೊಂಡುಕೊಳ್ಳಬೇಕು ಎಂದು ಯೋಜನೆ ಹಾಕಿಕೊಂಡಿದ್ದರೆ, ಈ ಸ್ಮಾರ್ಟ್ ವಾಚ್ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್​​ವಾಚ್​ 1.3 ಇಂಚಿನ ಡಿಸ್​​​ಪ್ಲೇಯನ್ನು ಒಳಗೊಂಡಿದ್ದು, 7 ದಿನಗಳ ಬ್ಯಾಟರಿ ಬ್ಯಾಕಪ್​ ಅನ್ನು ಕೂಡ ಒಳಗೊಂಡಿದ್ದು, ಇದು ಆಯಕ್ಟಿವಿಟಿ ಟ್ರ್ಯಾಕರ್‌ನೊಂದಿಗೆ ಬರುವ ವಿಶೇಷತೆ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ 170 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಕೂಡ ನೋಡಬಹುದಾದ ವಿಶೇಷತೆಯನ್ನು ಹೊಂದಿದ್ದು, ಇನ್ನು ಈ ಸ್ಮಾರ್ಟ್ ವಾಚ್ ಕೇವಲ ರೂ.1,199ಕ್ಕೆ ಖರೀದಿಗೆ ಲಭ್ಯವಾಗಲಿದೆ.

ಬೋಟ್​​ ಎಕ್ಸ್​ಟೆಂಡ್​ ಸ್ಮಾರ್ಟ್​​ವಾಚ್​ (boAt Xtend‌ Smart Watch)
ಈ ಸ್ಮಾರ್ಟ್​ವಾಚ್​ ದೊಡ್ಡ 1.69-ಇಂಚಿನ ಡಿಸ್ಪ್ಲೇ, ಬಿಪಿ ಮಾನಿಟರ್ ಅನ್ನು ಹೊಂದಿದ್ದು, ಬಹು ವಾಚ್ ಫೇಸ್​​ ಅನ್ನು ಕೂಡ ಒಳಗೊಂಡಿದೆ. ಈ ಸ್ಮಾರ್ಟ್ ವಾಚ್‌ನಲ್ಲಿ 14 ಸ್ಪೋರ್ಟ್ಸ್ ಮೋಡ್‌ಗಳು ಮತ್ತು ಸ್ಲೀಪ್ ಮಾನಿಟರ್ ಅನ್ನು ಕೂಡ ನೋಡಬಹುದು. ಸ್ಮಾರ್ಟ್‌ವಾಚ್ ಅಲೆಕ್ಸಾ ಬಿಲ್ಟ್-ಇನ್ ಸ್ಪೀಕರ್‌ನೊಂದಿಗೆ ಬರಲಿದ್ದು, ಇದನ್ನು ವಾಯ್ಸ್​ ಮೂಲಕವೂ ಸುಲಭದಲ್ಲಿ ನಿಯಂತ್ರಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಬೆಲೆ ಕೇವಲ ರೂ. 2499. ಆಗಿದ್ದು, ಈ ಸ್ಮಾರ್ಟ್​ವಾಚ್ ಹಲವಾರು ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬೋಟ್​​ ಎಕ್ಸ್​​ಟೆಂಡ್​ ವಾಕ್​: ಬೋಟ್​​ ಕಂಪೆನಿಯ ಬೋಟ್​​ ಎಕ್ಸ್​​ಟೆಂಡ್​ ವಾಕ್​ ಸ್ಮಸ್ಮಾರ್ಟವಾಚ್ ಮೂಲಕ ಬಿಪಿ ಮಾನಿಟರ್, ಹೃದಯ ಬಡಿತಗಳನ್ನು ಮಾನಿಟರ್ ಮಾಡಬಹುದಾಗಿದೆ. ಇದರಲ್ಲಿಯೂ ನೀವು 14 ಕ್ಕೂ ಹೆಚ್ಚು ಸ್ಪೋರ್ಟ್ಸ್​​​ ಮೋಡ್​​ಗಳನ್ನು ಪಡೆಯಬಹುದಾಗಿದ್ದು, 1.69 ಇಂಚಿನ ಹೆಚ್​​ಡಿ ಡಿಸ್ಪ್ಲೇಯನ್ನು ಒಳಗೊಂಡಿದೆ. ಬಹು ವಾಚ್ ಫೇಸ್​​ಗಳ ವಿಶೇಷತೆ ಹೊಂದಿರುವ ಈ ಸ್ಮಾರ್ಟ್ ವಾಚ್ ಬೆಲೆ 2999 ರೂಪಾಯಿಯಾಗಿದೆ. ಈ ಸ್ಮಾರ್ಟ್ ವಾಚ್ ಅಲೆಕ್ಸಾ ಬಿಲ್ಟ್-ಇನ್ ಸ್ಪೀಕರ್‌ನೊಂದಿಗೆ ಬರಲಿದ್ದು, ಫೀಚರ್​ ಮೂಲಕ ಇದನ್ನು ನೀವು ವಾಯ್ಸ್​ ಮೂಲಕ ನಿಯಂತ್ರಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Cheapest Recharge Plan : ರೂ.197 ನಲ್ಲಿ 70 ದಿನಗಳವರೆಗೆ ಅನಿಯಮಿತ ಕರೆ ಮತ್ತು ಡೇಟಾ! ಈ ಅವಕಾಶ ಮಿಸ್‌ಮಾಡ್ಕೋಬೇಡಿ!

Leave A Reply

Your email address will not be published.