ಮಂಗಳವಾರ, 27 ಅಕ್ಟೋಬರ್ 2026
Trending

ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ| ತಲೆಗೆ ಏಟು ಬಿದ್ದು, ಬಾಲಕಿ ಸಾವು!!!

ಜೋಕಾಲಿ ಕಟ್ಟಿ ಆಟವಾಡುತ್ತಿದ್ದ ಬಾಲಕಿಗೆ, ಕಾರು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡು, ಮೃತಪಟ್ಟ ಘಟನೆಯೊಂದು ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ನಡೆದಿದೆ.

Sponsored

ಮೃತ ಬಾಲಕಿಯನ್ನು ಪ್ರಾದಾನ್ಯ (09) ಎಂದು ಗುರುತಿಸಲಾಗಿದೆ.

Advertisement
Advertisement

ಮಕ್ಕಳಿಗೆ ಬೇಸಿಗ ರಜೆಯಾದ್ದರಿಂದ ಪ್ರಾದಾನ್ಯ ಮನೆಯ ಅಂಗಳದಲ್ಲಿ ಇತರ ಮಕ್ಕಳೊಂದಿಗೆ ಎದುರುಗಡೆ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಕುಳಿತು ಆಟ ಆಡುತ್ತಿದ್ದ ಸಂದರ್ಭದಲ್ಲಿ, ಸನಿಹದಲ್ಲಿ ನಿಲ್ಲಿಸಿದ್ದ ಕಾರನ್ನು ಸಂತೋಷ ಎಂಬಾತ ನಿರ್ಲಕ್ಷ್ಯತನದಿಂದ ಅತೀ ವೇಗವಾಗಿ ಚಲಾಯಿಸಿದ್ದರಿಂದ ಜೋಕಾಲಿ ಆಡುತ್ತಿದ್ದ
ಪ್ರಾದಾನ್ಯಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆಯು ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು.

ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement