ಶನಿವಾರ, 24 ಅಕ್ಟೋಬರ್ 2026

ದೈವಸ್ಥಾನಕ್ಕೆ ಸೇರಿದ ಪಂಜುರ್ಲಿ ದೈವದ ಮೊಗ ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಹೊತ್ತೊಯ್ದ ಕಳ್ಳರು !!

ದೈವಸ್ಥಾನಕ್ಕೆ ಸೇರಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಉತ್ರಂಜೆ ಬಳಿ ಬೆಳಕಿಗೆ ಬಂದಿದೆ.

ದೈವಸ್ಥಾನದ ಮನೆಯ ಎದುರಿನ ಭಾಗದ ಬೀಗ ಒಡೆದು ನುಗ್ಗಿದ ಕಳ್ಳರು ದೈವದ ಸೊತ್ತುಗಳಾದ ಕಂಚಿನ ದೀಪ, ದೈವದ ಮಂಚ, ಪಂಜುರ್ಲಿ ಮೊಗ ಸೇರಿದಂತೆ ಎರಡು ಗ್ಯಾಸ್ ಸಿಲಿಂಡರ್, ಸ್ಟವ್, ಕಾಣಿಕೆ ಹಾಗೂ ದೈವದ ಪರಿಕರಗಳನ್ನು ಕಳ್ಳತನ ಮಾಡಿದ್ದಾರೆ.

ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ