Entertainment
Subi Suresh Death : ಕಳಚಿತು ಮತ್ತೊಂದು ಸಿನಿ ಜಗತ್ತಿನ ಮುತ್ತು, ಮಲಯಾಳಂ ನಟಿ ಸುಬಿ ಸುರೇಶ್ ನಿಧನ
ಸೌತ್ ಫಿಲ್ಮ್ ಇಂಡಸ್ಟ್ರಿಗೆ ಯಾರ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಕಳೆದ ಕೆಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ಅನೇಕ ಗಣ್ಯರ ಹಠಾತ್ ಸಾವು ಸಂಭವಿಸುತ್ತಿರುವುದು ಎಲ್ಲರಲ್ಲೂ ಒಂದು ರೀತಿಯ ವೇದನೆ ತರುತ್ತಿದೆ. ಇತ್ತೀಚೆಗಷ್ಟೇ, ಎಸ್‌ಕೆ ಭಗವಾನ್ ಮತ್ತು ಮಾಯಿಲ್‌ಸಾಮಿ, ಜೂನಿಯರ್ ಎನ್‌ಟಿಆರ್ ಅವರ ಸೋದರಸಂಬಂಧಿ ತಾರಕ್ ರತ್ನ ಅವರ ನಿಧನವಾಗಿದ್ದು, ಈ ನೋವಿನಿಂದಲೇ ಜನ ಮೇಲೆ ಬಂದಿಲ್ಲ, ಈಗ ಮಲಯಾಳಂ ಇಂಡಸ್ಟ್ರಿಯಜನಪ್ರಿಯ ಹಾಸ್ಯನಟಿ ( comedy actress) ಮತ್ತು ಟಿವಿ ನಿರೂಪಕಿ( TV Anchor) ಸುಬಿ ಸುರೇಶ್ ನಿಧನ ರಾಗಿದ್ದಾರೆ.

