ಕನಸು ಕ್ರಿಯೇಷನ್ಸ್ ರವರ “ಎಚ್ಚರ” ಕಿರು ಚಿತ್ರದ ಪೋಸ್ಟರ್ ಬಿಡುಗಡೆ

ಕನಸು ಕ್ರಿಯೇಷನ್ಸ್ ಅರ್ಪಿಸುವ, ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ ಹಾಗೂ ಲೋಹಿತ್ ಪೂಜಾರಿ ಮರ್ಕಂಜ ಸಹ ನಿರ್ದೇಶನದ , ವಿವೇಕ್ ಪ್ರಭು ಛಾಯಾಗ್ರಹಣದಬಹುನಿರೀಕ್ಷಿತ”ಎಚ್ಚರ” ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟರಾದ ರಮೇಶ್ ರೈ ಕುಕ್ಕುವಳಿ ಇವರು ಬಿಡುಗಡೆ ಗೊಳಿಸಿದರು. ಈ ಕಿರು ಚಿತ್ರವು ಇದೇ ಅಕ್ಟೋಬರ್ 30 ನೇ ತಾರೀಕಿನಂದು ಸಂಜೆ 6.00 ಗಂಟೆಗೆ ಶ್ರವಣ್ ಪೆರ್ವ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.