Breaking Entertainment News Kannada
ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !
ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ 'ಮನೆ ಮಾರಾಟಕ್ಕಿದೆ' ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್; ಸಾಧು ಕೋಕಿಲ,ಡಾ.ರವಿಶಂಕರ್, ಚಿಕ್ಕಣ್ಣ ಮತ್ತು ಕಾರುಣ್ಯ ರಾವ್ ಅವರು ನಟಿಸಿದ್ದಾರೆ. ಇದು ಪಕ್ಕಾ ಕಾಮಿಡಿ ಮತ್ತು ಹಾರರ್ ಮಿಳಿತ ಚಿತ್ರ. House for sale film.