Liquor : ಮದ್ಯಪ್ರಿಯರೇ ಗಮನಿಸಿ! ಏಪ್ರಿಲ್ 1 ರಿಂದ ಓಪನ್ ಏರ್ ಬಾರ್ ಗಳು ಕ್ಲೋಸ್!
ಎಣ್ಣೆಯ( Liquor )ಮಹಿಮೆಯ ಅರಿಯದವರು ಇರಲು ಸಾಧ್ಯವೇ ಇಲ್ಲ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ (Bar) ಎಂಟ್ರಿ ಕೊಡದೆ ಇದ್ದರೆ ಅವರ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!. ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!. ಈ ನಡುವೆ ಎಣ್ಣೆ ಪ್ರಿಯರಿಗೆ ಮುಖ್ಯ ಮಾಹಿತಿ ನೀಡಲಾಗಿದೆ. ಇತ್ತೀಚೆಗೆ ನಡೆದ ನೂತನ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ(CM) ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಎಲ್ಲಾ ಓಪನ್ ಏರ್ ಬಾರ್ ಗಳನ್ನು ಮುಚ್ಚಿಸುವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಅನುಮೋದನೆ ದೊರೆತಿದ್ದು ಅಂಗಡಿ(Shop) ಇಲ್ಲವೇ ಕೌಂಟರ್‌ಗಳಲ್ಲಿ (Counter)ಮಾತ್ರ ಮದ್ಯ ಮಾರಾಟ(Liquor Sale) ಮಾಡಲು ಅವಕಾಶ ಕಲ್ಪಿಸಲಾಗಿದೆ.










