News
Uppinangady: ಶಿವರಾತ್ರಿಯಂದು ರಸ್ತೆ ಅಡ್ಡ ಇಟ್ಟ ಸಿಮೆಂಟ್ ಮೋರಿ; ಬೈಕ್ ಸವಾರ ಡಿಕ್ಕಿ ಹೊಡೆದು ಗಂಭೀರ ಗಾಯ
Uppinangady: ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಸಿಮೆಂಟ್ ಮೋರಿಯನ್ನು ಶಿವರಾತ್ರಿ ದಿನ ರಾತ್ರಿ ಯಾರೋ ರಸ್ತೆಗೆ ಅಡ್ಡವಾಗಿ ಇಟ್ಟ ಪರಿಣಾಮ ಇದರ ಬಗ್ಗೆ ಗೊತ್ತಿಲ್ಲದೆ ಬೈಕ್ ಸವಾರರೊಬ್ಬರು ಮೋರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹಿರೇಬಂಡಾಡಿಯಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ 5 ರ ಸುಮಾರಿಗೆ ನಡೆದಿದೆ.

