ರಾತ್ರಿ ವೇಳೆ ಮನೆ ಮುಂದೆ ಒಣ ಹಾಕುತ್ತಿದ್ದ ತಮ್ಮ ಉಳ ಉಡುಪುಗಳು ಬೆಳಗ್ಗೆಯಾಗುತ್ತಿದ್ದಂತೆ ಮಂಗಮಾಯ ಆಗುತ್ತಿದ್ದು, ಬೆಂಗಳೂರಿನ ಇಂದಿರಾನಗರದ ಹೆಣ್ಣು ಮಕ್ಕಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಕೊನೆಗೆ ಅವರಿಗೆ ಇದನ್ನು ಯಾರು ಒಬ್ಬ ಕಾಮುಕ ಖದೀಮ ಅಪಹರಿಸುತ್ತಿದ್ದಾನೆ ಎಂಬುದು ಅರಿವಾಯಿತು. ಆತನನ್ನು ಮಟ್ಟ ಹಾಕಲು ಏನಾದರೂ ಮಾಡಬೇಕಲ್ಲ ಎಂದುಕೊಂಡು ಯುವತಿಯರು ಸೇರಿ ಒಂದು ಸಕ್ಕತ್ ಪ್ಲಾನ್ ಮಾಡಿದ್ದು, ಅದು ವರ್ಕೌಟ್ ಆಗಿದೆ. ಹಾಗಿದ್ರೆ ಆ ಹುಡುಗಿಯರೆಲ್ಲ ಸೇರಿ ಮಾಡಿದ ಪ್ಲಾನ್ ಏನು? ಒಳ ಉಡುಪು ಖದೀಮ ಖೆಡ್ಡಕ್ಕೆ ಬಿದ್ದಿದ್ದು ಹೇಗೆ?
ಇಂದಿರಾನಗರದ ಹೊಯ್ಸಳನಗರದಲ್ಲಿರುವ ಇಬ್ಬರು ಯುವತಿಯರು ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. ಇತ್ತೀಚಿಗೆ ಈ ಯುವತಿಯರ ಮನೆಯ ಕಾಂಪೌಂಡ್ನಲ್ಲಿ ಒಣ ಹಾಕುತ್ತಿದ್ದ ಬಟ್ಟೆಗಳಲ್ಲಿ ಒಳಉಡುಪು ಮಾತ್ರ ಮಾಯವಾಗ್ತಿದ್ದವು. ಕದ್ದ ಬಟ್ಟೆಗಳು ಒಂದು ದಿನದ ನಂತರ ಮತ್ತೆ ಸಿಕ್ಕಿದ್ವು, ಆದ್ರೆ ಒಣ ಹಾಕಿದ್ದ ಹೊಸ ಸೆಟ್ ಒಳಉಡುಪು ಕಳ್ಳತನವಾಗಿತ್ತು. ಪದೇ ಪದೇ ಸಂಭವಿಸುತ್ತಿರುವ ಘಟನೆಗಳಿಂದ ಗಾಬರಿಗೊಂಡ ಯುವತಿಯರು ಈ ಕದೀಮನನ್ನ ಹಿಡಿಯಲೇಬೇಕು ಅಂತ ಒಂದು ಪ್ಲಾನ್ ಮಾಡಿದ್ರು.
ಅದೇನೆಂದರೆ ಆನ್ಲೈನ್ನಲ್ಲಿ ಹುಡುಕಿ ಸುಮಾರು 1,300 ರೂ.ಗೆ ಈ ಕ್ಯಾಮೆರಾ ಖರೀದಿಸಿ ಮನೆ ಬಳಿ ಅಳವಡಿಸಿದರು. ಮರುದಿನ ಬೆಳಗ್ಗೆ ಕ್ಯಾಮೆರಾ ನೋಡಿದಾಗ ಹುಸೇನ್ ಎಂಬಾತ ಬೆಳಗಿನ ಜಾವ 3 ಗಂಟೆಗೆ ತಮ್ಮ ಮನೆ ಕಾಂಪೌಂಡ್ಗೆ ಬಂದು ಬಟ್ಟೆ ಕದಿಯುತ್ತಿರೋ ವಿಚಾರ ಬಯಲಾಗಿದೆ. ಮೊದಲು ಅವನು ಕದ್ದ ಒಳ ಉಡುಪುಗಳನ್ನ ಬದಲಾಯಿಸುತ್ತಿದ್ದ ಬಳಿಕ ಹೊಸ ಬಟ್ಟೆಗಳನ್ನು ಕದಿಯುತ್ತಿದ್ದ. ವೀಡಿಯೊದಲ್ಲಿ ಅವನು ಹೊಸದಾಗಿ ಕದ್ದ ಬಟ್ಟೆಗಳನ್ನು ಧರಿಸಿ ಕ್ಯಾಮೆರಾದ ಮುಂದೆ ಲೈಂಗಿಕವಾಗಿ ಸ್ಪಷ್ಟವಾದ ಕೃತ್ಯಗಳಲ್ಲಿ ತೊಡಗಿದ್ದನ್ನು ತೋರಿಸಲಾಗಿದೆ. ನಂತರ ಸ್ಥಳದಿಂದ ಎಸ್ಕೇಪ್ ಆಗ್ತಿದ್ದ.
ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಶೋಧ ನಡೆಸಿ ಅಸ್ಸಾಂ ಮೂಲದ ಸದ್ದಾಂ ಹುಸೇನ್ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಅಬ್ದುಲ್ ಹುಸೇನ್ ಅಲಿಯಾಸ್ ಸದ್ದಾಂ (23) ಇಂದಿರಾನಗರದ ನಿವಾಸಿ ಮತ್ತು ಅಸ್ಸಾಂ ಮೂಲದವನಾಗಿದ್ದು, ಇ-ಕಾಮರ್ಸ್ ಕಂಪನಿಯಲ್ಲಿ ವಿತರಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.



