ಸೋಮವಾರ, 26 ಅಕ್ಟೋಬರ್ 2026
Trending

Russia: ರಷ್ಯಾದಲ್ಲಿ ಇಂತಹ ಒಳಉಡುಪುಗಳನ್ನು ಧರಿಸುವಂತಿಲ್ಲ!

Ban on wearing lace Underwear: ಪ್ರತಿಯೊಬ್ಬ ವ್ಯಕ್ತಿಯೂ ಒಳಉಡುಪುಗಳನ್ನು ಬಳಸುತ್ತಾರೆ. ಆದರೆ ಇಂದು ನಾವು ನಿಮಗೆ ಒಂದು ವಿಷಯವನ್ನು ಹೇಳಲಿದ್ದೇವೆ ಅದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ.

Ban on wearing lace Underwear: ಪ್ರತಿಯೊಬ್ಬ ವ್ಯಕ್ತಿಯೂ ಒಳಉಡುಪುಗಳನ್ನು ಬಳಸುತ್ತಾರೆ. ಆದರೆ ಇಂದು ನಾವು ನಿಮಗೆ ಒಂದು ವಿಷಯವನ್ನು ಹೇಳಲಿದ್ದೇವೆ ಅದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಪುರುಷರು ಮತ್ತು ಮಹಿಳೆಯರಿಗೆ, ಒಳ ಉಡುಪು ಅವರ ಸಾಮಾನ್ಯ ಜೀವನದ ಒಂದು ಭಾಗವಾಗಿದೆ. ಕಂಫರ್ಟ್ ಗೆ ತಕ್ಕಂತೆ ವಿವಿಧ ರೀತಿಯ ಮತ್ತು ಸೈಜ್ ನ ಒಳಉಡುಪುಗಳನ್ನು ತಯಾರಿಸುವ ಹಲವು ಕಂಪನಿಗಳು ಮಾರುಕಟ್ಟೆಯಲ್ಲಿವೆ. ಆದರೆ ರಷ್ಯಾದಲ್ಲಿ ಸರ್ಕಾರದಿಂದ ನಿಷೇಧಿಸಲ್ಪಟ್ಟ ಕೆಲವು ಒಳ ಉಡುಪುಗಳಿವೆ. ಇದರ ಹಿಂದಿನ ಕಾರಣವೇನು? ಇಲ್ಲಿದೆ ಉತ್ತರ.

Sponsored

ರಷ್ಯಾದಲ್ಲಿ ಸರ್ಕಾರದಿಂದ ನಿಷೇಧಿಸಲ್ಪಟ್ಟ ಕೆಲವು ಒಳ ಉಡುಪುಗಳಿವೆ. ರಷ್ಯಾವನ್ನು ಹೊರತುಪಡಿಸಿ, ಅಲ್ಮಾಟಿ, ಕಝಾಕಿಸ್ತಾನ್ ಮತ್ತು ಬೆಲಾರಸ್ನಲ್ಲಿ ಮಹಿಳೆಯರಿಗೆ ಲೇಸ್ ಒಳ ಉಡುಪುಗಳನ್ನು ಧರಿಸುವುದನ್ನು ವಿಶೇಷವಾಗಿ ನಿಷೇಧಿಸಲಾಗಿದೆ. ಇಲ್ಲಿ ಮಹಿಳೆಯರು ಒಳ ಉಡುಪನ್ನು ಧರಿಸುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಇಲ್ಲಿಯವರೆಗೂ ಹಲವು ಪ್ರತಿಭಟನೆಗಳು ನಡೆದಿದ್ದರೂ ಸರ್ಕಾರದ ಕಡೆಯಿಂದ ನಿಷೇಧಾಜ್ಞೆ ಮುಂದುವರಿದಿದೆ.

ಮಾಹಿತಿಯ ಪ್ರಕಾರ, ಮಹಿಳೆಯರು ಲೇಸ್ ಒಳ ಉಡುಪು ಧರಿಸುವುದನ್ನು ನಿಷೇಧಿಸುವ ಈ ಕಾನೂನನ್ನು 2011 ರಲ್ಲಿ ಮಾಡಲಾಗಿತ್ತು, ಅದು ಇನ್ನೂ ಜಾರಿಯಲ್ಲಿದೆ. ರಷ್ಯಾದಲ್ಲಿ ಈ ಕಾನೂನಿನ ಅಡಿಯಲ್ಲಿ, ಲೇಸ್ ಒಳ ಉಡುಪುಗಳ ಉತ್ಪಾದನೆ, ಆಮದು ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧವಿದೆ.

ರಷ್ಯಾದಂತಹ ದೇಶವು ಯಾಕೆ ಈ ರೀತಿಯ ನಿಷೇಧವನ್ನು ವಿಧಿಸಿದೆ. ಏಕೆಂದರೆ ಈ ದೇಶಗಳನ್ನು ಹೊರತು ಪಡಿಸಿ ಇಲ್ಲಿಯವರೆಗೂ ಬೇರಾವ ದೇಶದಲ್ಲಿಯೂ ನಿಷೇಧ ಹೇರಿಲ್ಲ. ಲೇಸ್ ಒಳ ಉಡುಪು ನಿಷೇಧದ ಹಿಂದಿನ ಉದ್ದೇಶವು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುವುದಾಗಿದೆ ಎಂದು ಹೇಳಲಾಗಿದೆ.

ಲೇಸ್ ಒಳ ಉಡುಪು ನಿಷೇಧದ ಬಗ್ಗೆ ಸರ್ಕಾರದ ನಿಲುವು ಭದ್ರತಾ ಕಾರಣಗಳಿಗಾಗಿ ಮಾಡಲಾಗಿದೆ. ಸಿಂಥೆಟಿಕ್ ಬಟ್ಟೆಗಳಿಂದ ಮಾಡಿದ ಲೇಸ್ ಒಳ ಉಡುಪುಗಳು ಸಾಕಷ್ಟು ತೇವಾಂಶವನ್ನು ಹೀರಿಕೊಳ್ಳದ ಕಾರಣ, ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುವ ಕಾರಣಗಳನ್ನು ನೀಡಲಾಗಿದೆ.