ಭಾನುವಾರ, 25 ಅಕ್ಟೋಬರ್ 2026
Trending

ಮಹಿಳಾ ದಿನಾಚರಣೆ: ಮಂಗಳೂರು ಲಯನ್ಸ್ ಕ್ಲಬ್’ರಿಂದ ಬರ್ಕೆ ಸಹಾಯಕ ಪೊಲೀಸ್ ಉಪ ನಿರೀಕ್ಷಕಿ ಶ್ರೀ. ಧರ್ಮಾವತಿ ಪುರಂದರ ಗೌಡ ಭೋಜಾರರಿಗೆ ಸನ್ಮಾನ

ಮಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಲಯನ್ಸ್ ಕ್ಲಬ್ ಡಿ 17ರವರು ಕಳೆದ ಶುಕ್ರವಾರ 06.03.2026 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು.

Sponsored

ಅದರ ಅಂಗವಾಗಿ ಹಿರಿಯ ಮಹಿಳೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಅದರಂತೆ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ನಿಷ್ಠೆ ಪ್ರಾಮಾಣಿಕತೆಯಿಂದ ದೀರ್ಘಕಾಲದಿಂದ ಕರ್ತವ್ಯ ನಿರ್ವಹಿಸುತ್ತಿರುವ ಬರ್ಕೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಧರ್ಮಾವತಿ ಪುರಂದರ ಗೌಡ ಭೋಜಾರ ಇವರನ್ನು ಸನ್ಮಾನಿಸಲಾಯಿತು.