ಭಾನುವಾರ, 25 ಅಕ್ಟೋಬರ್ 2026

Woman Sells daughter: ಆಂಟಿ ಪ್ರೀತ್ಸೇ, ಹೆತ್ತ ಮಗಳನ್ನು ಎರಡು ಲಕ್ಷಕ್ಕೆ ಮಾರಾಟ ಮಾಡಿ, ಪ್ರಿಯಕರನೊಂದಿಗೆ ಮಹಿಳೆ ಎಸ್ಕೇಪ್!

Image source : India posts english

Woman sells daughter: ತಾಯಿಯೊಬ್ಬಳು ತನ್ನ ಹೆತ್ತ ಮಗಳನ್ನು ಎರಡೂವರೆ ಲಕ್ಷಕ್ಕೆ ಮಾರಾಟ ಮಾಡಿ (Woman sells daughter), ಪ್ರಿಯಕರನೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬಿಹಾರದಲ್ಲಿ (bihar) ನಡೆದಿದೆ. ಆಕೆ ಅಪ್ರಾಪ್ತ ಬಾಲಕಿಯಾಗಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಾಲಕಿಯನ್ನು ವಶಪಡಿಸಿಕೊಂಡಿದ್ದಾರೆ.

Sponsored

ಮಹಿಳೆ ಜಾರ್ಖಂಡ್‌ ನಿವಾಸಿಯಾಗಿದ್ದು, ಪತಿಯ ಸಾವಿನ ನಂತರ ತನ್ನ ಅಪ್ರಾಪ್ತ ಪುತ್ರಿಯನ್ನು ದುಡ್ಡಿಗಾಗಿ ಬಿಹಾರದ ಮುಜಾಫರ್‌ಪುರದಲ್ಲಿ ಮಾರಾಟ (Sold Minor Daughter in Muzaffarpur) ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

Marriage AdMarriage AdSponsored

ರಾಂಚಿಯಲ್ಲಿ ವಾಸಿಸುತ್ತಿದ್ದ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕೆಲಸದ ನಿಮಿತ್ತ ಮುಜಾಫರ್‌ಪುರಕ್ಕೆ ತಲುಪಿದ್ದರು. ನಗರದ ಗೋಬರ್ಸಾಹಿ ಪ್ರದೇಶದಲ್ಲಿ ದಂಪತಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಮಧ್ಯೆ ಮಹಿಳೆಯ ಪತಿ ಸಾವನ್ನಪ್ಪಿದ್ದಾರೆ. ಬಳಿಕ ಸಂಸಾರದ ಹೊರೆ ತಾಯಿಯ ಮೇಲೆ ಬಿದ್ದಿದೆ. ಈಗಾಗಲೇ ಪತಿ ಸಾವನ್ನಪ್ಪಿ ಎರಡು ವರ್ಷಗಳಾಗಿವೆ.

ಪತಿಯಿಲ್ಲದೆ ಸಂಸಾರದ ಹೊರೆ ಹೊರುವುದು ಮಹಿಳೆಗೆ ಕಷ್ಟವಾಗಿದೆ. ಈ ವೇಳೆ ಮಹಿಳೆಗೆ ಯುವಕನೊಬ್ಬನ ಪರಿಚಯವಾಗಿದ್ದು, ಇಬ್ಬರೂ ಪ್ರೀತಿಸಲು ಆರಂಭಿಸಿದರು.
ಇದಿಷ್ಟೇ ಅಲ್ಲದೆ, ಇಬ್ಬರೂ ಮದುವೆಗೂ ಸಿದ್ಧರಾದರು. ಆದರೆ, ಮಹಿಳೆಯ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಯುವಕ ನಿರಾಕರಿಸಿದ್ದಾನೆ.

ಮಹಿಳೆ ಯುವಕನೊಂದಿಗೆ ಜೀವನ ನಡೆಸುವುದಕ್ಕಾಗಿ ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾಳೆ. ತನ್ನ ನೆರೆಹೊರೆಯಲ್ಲಿ ವಾಸಿಸುವ ದಂಪತಿಯ ಸಹಾಯದಿಂದ ಮಹಿಳೆ ತನ್ನ ಅಪ್ರಾಪ್ತ ಮಗಳನ್ನು ಮಾರಾಟ ಮಾಡಲು ಉದ್ಯಮಿಯೊಬ್ಬರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ನಂತರ ವ್ಯಾಪಾರಸ್ಥನಿಗೆ ಮಗಳನ್ನು ಎರಡೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ.

ಮಗಳನ್ನು ಮಾರಾಟ ಮಾಡಿದ ನಂತರ ಮಹಿಳೆ ತನ್ನ ಮಗನನ್ನು ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಬಿಟ್ಟು ತನ್ನ ಪ್ರಿಯಕರ ಪತಿಯೊಂದಿಗೆ ದೆಹಲಿಗೆ ಹೋಗಿದ್ದಾಳೆ. ಆದರೆ, ಆಕೆ ಮಗನ ಹಾಸ್ಟೆಲ್ ಶುಲ್ಕವನ್ನು ಕಟ್ಟಿಲ್ಲ. ಈ ವೇಳೆ ಮಗನನ್ನು ವಿಚಾರಿಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ.

ಈ ಬಗ್ಗೆ ಹಾಸ್ಟೆಲ್ ನಿರ್ವಾಹಕರು ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಕ್ಕಳ ಅಜ್ಜ ಮತ್ತು ಚಿಕ್ಕಪ್ಪ ರಾಂಚಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಮಧ್ಯವರ್ತಿ ದಂಪತಿಯನ್ನು ಬಂಧಿಸಿದ್ದಾರೆ. ಬಳಿಕ ಹೆಣ್ಣು ಮಗುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ ಬಾಲಕಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.