ಭಾನುವಾರ, 25 ಅಕ್ಟೋಬರ್ 2026

‘ಮುಂದಿನ ವರ್ಷದ ಆರಂಭದ ವೇಳೆಗೆ ಭಾರತಕ್ಕೆ ಮರಳುವೆ’- ಲಲಿತ್ ಮೋದಿ

ಟ್ರೈಬ್ಯುನಲ್‌ನಿಂದ ತಮಗೆ ಅನುಕೂಲಕರವಾದ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ, ಭ್ರಷ್ಟಾಚಾರದ ಆರೋಪದ ನಡುವೆ ದೇಶ ತೊರೆದ 14 ವರ್ಷಗಳ ನಂತರ ಭಾರತಕ್ಕೆ ಮರಳುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಥಾಪಕ ಲಲಿತ್ ಮೋದಿ ಘೋಷಿಸಿದ್ದಾರೆ.

Sponsored

‘ಸ್ಮಗ್ಲರ್ಸ್ ಅಂಡ್ ಫಾರಿನ್ ಎಕ್ಸ್ಚೇಂಜ್ ಮ್ಯಾನಿಪುಲೇಟರ್ಸ್ – ಫಾರ್ಫೀಚರ್ ಆಫ್ ಪ್ರಾಪರ್ಟಿ – ಆಕ್ಟ್’ (SAFEMA) ಅಡಿಯಲ್ಲಿನ ಮೇಲ್ಮನವಿ ನ್ಯಾಯಮಂಡಳಿಯು, ಮಂಗಳವಾರದಂದು 2009ರ ಐಪಿಎಲ್ ದಕ್ಷಿಣ ಆಫ್ರಿಕಾ ಫೆಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಹುತೇಕ ತೀರ್ಮಾನಗಳು ಮತ್ತು ದಂಡಗಳನ್ನು ರದ್ದುಗೊಳಿಸಿದೆ.

Marriage AdMarriage AdSponsored

ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ವಿದೇಶದಲ್ಲಿ ನೆಲೆಸಿರುವ ಮೋದಿ, ತಮ್ಮ 16 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಹೇಳಿದರು.

ಬುಧವಾರದಂದು ಭಾರತಕ್ಕೆ ಮರಳಲು ಯೋಜಿಸುತ್ತಿರುವುದಾಗಿ ಅವರು ವಿಡಿಯೋವೊಂದರಲ್ಲಿ ತಿಳಿಸಿದ್ದಾರೆ.

“ನಿನ್ನೆ ಬಂದ ತೀರ್ಪಿನ ಬಗ್ಗೆ ನನಗೆ ನಿಜಕ್ಕೂ ತುಂಬಾ ಸಂತೋಷವಾಗಿದೆ. ಇದೊಂದು ಅತ್ಯುತ್ತಮ ದಿನವಾಗಿದೆ. ಕಳೆದ 16 ವರ್ಷಗಳಿಂದ ನಾನು ಹೋರಾಡಿದ್ದೇನೆ; ಮಾಧ್ಯಮಗಳು ಮತ್ತು ಎಲ್ಲರ ಮುಂದೆ ನಾನು ಹೇಳುತ್ತಾ ಬಂದಿದ್ದ ವಿಷಯವೇ ಅಂತಿಮವಾಗಿ ಸತ್ಯವೆಂದು ಸಾಬೀತಾಗಿದೆ. ನ್ಯಾಯಮಂಡಳಿಯು ನನ್ನ ಪರವಾಗಿ ತೀರ್ಪು ನೀಡಿರುವುದಕ್ಕೆ ನನಗೆ ಬಹಳ ಸಂತೋಷವಿದೆ. ಐಪಿಎಲ್‌ನ ಹಿತಾಸಕ್ತಿಯ ಬಗ್ಗೆ ಮಾತ್ರವೇ ನನಗೆ ಕಾಳಜಿ ಇತ್ತು, ಬೇರೇನೂ ಇರಲಿಲ್ಲ. ಅದು ನನಗೆ ಅತ್ಯಂತ ಪ್ರಿಯವಾದದ್ದು. ಆ ಅಧ್ಯಾಯ ಈಗ ಮುಗಿದಿದೆ, ನಾನು ನನ್ನ ಜೀವನದಲ್ಲಿ ಮುಂದೆ ಸಾಗಲಿದ್ದೇನೆ ಮತ್ತು ಭಾರತಕ್ಕೆ ಮರಳಲು ಎದುರು ನೋಡುತ್ತಿದ್ದೇನೆ. ಬಹುಶಃ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಾನು ಹಿಂತಿರುಗಲಿದ್ದೇನೆ. ಅಕ್ಟೋಬರ್‌ನಲ್ಲಿ ನನ್ನ ಮಗಳಿಗೆ ಮಗುವಾಗಲಿದೆ (ಮೊಮ್ಮಗನ ಜನನ); ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂಬ ಭರವಸೆ ಇದೆ ಮತ್ತು ನಾನು ಭಾರತಕ್ಕೆ ಮರಳುತ್ತೇನೆ,” ಎಂದು ‘ಎಎನ್‌ಐ’ ಸುದ್ದಿ ಸಂಸ್ಥೆ ಪಡೆದ ವಿಡಿಯೋದಲ್ಲಿ ಅವರು ಹೇಳಿದ್ದಾರೆ.