ಸೋಮವಾರ, 26 ಅಕ್ಟೋಬರ್ 2026
Trending

ಮೂಗಿ ಎಂದು ಪ್ರತಿದಿನ ಹೀಯಾಳಿಸುತ್ತಿದ್ದ ಗಂಡನ ನಾಲಿಗೆಯನ್ನು ಕಿಸ್ ಮಾಡುವಾಗ ಕಚ್ಚಿ ಕತ್ತರಿಸಿ ಮೂಗನನ್ನಾಗಿಸಿದ ಪತ್ನಿ !!

ಮೂಗಿ ಎಂದು ಪ್ರತಿದಿನ ಹೀಯಾಳಿಸುತ್ತಿದ್ದ ಪತಿಯ ಕಾಟದಿಂದ ರೋಸಿಹೋಗಿದ್ದ ಮಹಿಳೆಯೊಬ್ಬಳು ಮಾಸ್ಟರ್ ಪ್ಲಾನ್ ಮಾಡಿ ಗಂಡನನ್ನೇ ಮೂಗನನ್ನಾಗಿ ಮಾಡಿದ್ದಾಳೆ. ಆತನಿಗೆ ಕಿಸ್ ಮಾಡುವ ನೆಪದಲ್ಲಿ ಆಕೆ ಆತನ ನಾಲಿಗೆಯನ್ನೇ ಹಲ್ಲಿನಿಂದ ಕಚ್ಚಿ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

Sponsored

ಶ್ರೀಪಾಲ್ ಮೌರ್ಯ ನಾಲಿಗೆ ಕಳೆದುಕೊಂಡ ವ್ಯಕ್ತಿ. ದಂಪತಿ ಒಂದು ವರ್ಷದ ಹಿಂದೆ ಬಿಹಾರದಲ್ಲಿ ಮದುವೆಯಾಗಿದ್ದರು. ಈತನ ಪತ್ನಿ ಮೂಗಿಯಾಗಿದ್ದಳು. ನಿನಗೆ ಮಾತನಾಡಲು ಬರುವುದಿಲ್ಲ ಎಂದು ಪತ್ನಿಯನ್ನು ಶ್ರೀಪಾಲ್ ಆಗಾಗ್ಗೆ ಹೀಯಾಳಿಸುತ್ತಿದ್ದ.

Advertisement
Advertisement

ಬುಧವಾರ ಸಂಜೆ ಶ್ರೀಪಾಲ್ ಕೂಲಿ ಕೆಲಸ ಮುಗಿಸಿ ಮನೆಗೆ ಮರಳುವುದನ್ನೇ ಕಾದು ಕೂತಿದ್ದ ಪತ್ನಿ ಆತನಿಗೆ ಕಿಸ್ ಮಾಡಲು ಹೋಗಿದ್ದಾಳೆ. ಆ ಸಂದರ್ಭ ಆಕೆ ಆತನ ನಾಲಿಗೆಯನ್ನು ಹಲ್ಲುಗಳಿಂದ ಕತ್ತರಿಸಿದ್ದಾಳೆ. ನಾಲಿಗೆ ಕಳೆದುಕೊಂಡು ನೋವಿನಿಂದ ಶ್ರೀಪಾಲ್ ಚೀರಾಡಿದ್ದಾನೆ. ನಂತರ ಮನೆಯವರು ಜಮಾಯಿಸಿ ಬರೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ಬಗ್ಗೆ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Advertisement