ಸೋಮವಾರ, 26 ಅಕ್ಟೋಬರ್ 2026
Trending

ವಿಟ್ಲ: ಮನೆಯೊಳಗೆ ನುಗ್ಗಿ ವೃದ್ಧನ ಚಿನ್ನದ ಸರ ಸುಲಿಗೆ

ಬಂಟ್ವಾಳ: ತಾಲೂಕಿನ ಇಡ್ಕಿದು ಗ್ರಾಮದ ನಿವಾಸಿ ಕೆ.ಸೂರ್ಯನಾರಾಯಣ (79) ಅವರ ಮನೆಯಲ್ಲಿ ತಡರಾತ್ರಿ ನುಗ್ಗಿದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ರೂ.2.60 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

Sponsored

ಜು.25 ರಂದು ರಾತ್ರಿ ಕುಟುಂಬ ಸದಸ್ಯರ ಜೊತೆ ಮನೆಯಲ್ಲಿ ಮಲಗಿದ್ದ ಸಂದರ್ಭ ಇಬ್ಬರು ಅಪರಿಚಿತರು ಮನೆಯೊಳಗೆ ಪ್ರವೇಶ ಮಾಡಿರುವುದನ್ನು ಸೂರ್ಯನಾರಾಯಣ ಗಮನಿಸಿದ್ದಾರೆ. ಎದ್ದು ನೋಡುವಷ್ಟರಲ್ಲಿ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

ಈ ಕುರಿತು ಸೂರ್ಯನಾರಾಯಣ ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Advertisement