ಭಾನುವಾರ, 25 ಅಕ್ಟೋಬರ್ 2026

ಕೇತನ್ ಕೊಲೆಯನ್ನು ಬೆಂಬಲಿಸಿ, ಅಪಹಾಸ್ಯ ಮಾಡಿ ವಿಡಿಯೋ ಪೋಸ್ಟ್ – ವೈದ್ಯೆಯ ಲೈಸೆನ್ಸ್​ 5 ವರ್ಷ ರದ್ದು !!

ದೇಶವನ್ನೇ ಬೆಚ್ಚಿಬೀಳಿಸಿದ ಪುಣೆಯ ರಿಯಲ್ ಎಸ್ಟೇಟ್ ಏಜೆಂಟ್‌ ಕೇತನ್ ಅಗರ್ವಾಲ್ ಹತ್ಯೆಯನ್ನು ಅಪಹಾಸ್ಯ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಮಧ್ಯಪ್ರದೇಶದ ದಂತವೈದ್ಯೆ ಡಾ. ಮುಸ್ಕಾನ್ ಸೋನಿ ಅವರು ವಿಡಿಯೋವನ್ನು ಹಾಕಿದ್ದರು. ಈ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಾಕ್ತವಾಗಿತ್ತು. ಇದೀಗ . ಮುಸ್ಕಾನ್ ಸೋನಿ ಅವರನ್ನು ಐದು ವರ್ಷಗಳ ಕಾಲ AIDSA ಸಂಘದಿಂದ ಅಮಾನತುಗೊಳಿಸಲಾಗಿದೆ.

Sponsored

ಕೇತನ್ ಅಗರ್ವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಓರ್ವಳು ಕೊಲೆ ಮಾಡಿರುವ ಆರೋಪ ಹೊತ್ತ ಸಿಯಾಳ ಪರವಾಗಿ ಕಮೆಂಟ್​ಮಾಡಿದ್ದಳು. ಅವಳು ಅಂದುಕೊಂಡಂತೆ ರಾತ್ರೋರಾತ್ರಿ ಫೇಮಸ್​ ಕೂಡ ಆದಳು. ಅದನ್ನೇ ಫಾಲೋ ಮಾಡಿ, ತನ್ನ ಹುದ್ದೆಯನ್ನೂ ಮರೆತ ಮಧ್ಯಪ್ರದೇಶದ ಡಾ. ಮುಸ್ಕಾನ್ ಸೋನಿ ಎಂಬ ವೈದ್ಯೆ, ಕೇತನ್​ ಸಾವನ್ನು ಸಂಭ್ರಮಿಸುವ ರೀತಿಯಲ್ಲಿ ಕುಹಕವಾಡಿ ವಿಡಿಯೋ ಮಾಡಿದ್ದಳು. ಕೆಲವರು ಪುರುಷರನ್ನು ದ್ವೇಷಿಸುವುದೇ ಮಹಿಳಾವಾದ ಅಂದುಕೊಂಡಿದ್ದಾರೆ. ಮದುವೆಯಾಗಿ, ಮಕ್ಕಳಿದ್ದವರೂ ತಮಗೆ ಪುರುಷರನ್ನು ಕಂಡರೆ ಆಗುವುದಿಲ್ಲ ಎನ್ನುವ ಮಹಿಳಾವಾದಿಗಳು ನಮ್ಮ ನಡುವೆಯೇ ಸಾಕಷ್ಟು ಇದ್ದಾರೆ. ಅದೇ ರೀತಿ ಈ ಮುಸ್ಕಾನ್ ಕೂಡ ನನಗೆ ಪುರುಷರು ಎಂದರೆ ಆಗಲ್ಲ ಎಂದು ಕೇತನ್​ ಸಾವಿನ ಫೋಟೋ ಹಾಕಿ ವಿಡಿಯೋದಲ್ಲಿ ಗಹಗಹಿಸಿ ಅಸಹ್ಯಕರವಾಗಿ ನಕ್ಕಿದ್ದಳು.

Marriage AdMarriage AdSponsored

ಅವಳ ಉದ್ದೇಶ ತಾನು ರಾತ್ರೋರಾತ್ರಿ ಫೇಮಸ್​ ಆಗ್ತೇನೆ ಎಂದಾಗಿತ್ತು. ತನ್ನ ಪರವಾಗಿ ಸೋ ಕಾಲ್ಡ್​ ಮಹಿಳಾವಾದಿಗಳು ನಿಲ್ಲಬಹುದು ಎಂದುಕೊಂಡಿದ್ದಳೋ ಏನೋ. ಆದರೆ ಅದು ಉಲ್ಟಾ ಆಗಿದೆ.  ಫೇಮಸ್​ ಅಂತೂ ಆಗಿದ್ದಾಳೆ. ಆದರೆ, ಇವಳ ಈ ವಿಕೃತನಕ್ಕೆ ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರ ಸಂಘ (AIDSA) ಡಾ. ಮುಸ್ಕಾನ್ ಸೋನಿಯನ್ನು ಐದು ವರ್ಷಗಳ ಕಾಲ ಸಂಘದ ಸ್ಥಾನ ಮತ್ತು ಸದಸ್ಯತ್ವದಿಂದ ಅಮಾನತುಗೊಳಿಸಿದೆ.