ಭಾನುವಾರ, 25 ಅಕ್ಟೋಬರ್ 2026

ಉಚ್ಚಿಲ ಮಹಾಲಕ್ಷ್ಮೀ ದೇಗುಲ: ಮಾಧವ ಮಂಗಲ ಪೂಜಾರ್ಯರ ಪುತ್ತಥಳಿ ಸೆ.25 ರಂದು ಅನಾವರಣ

ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಐತಿಹಾಸಿನ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.

Sponsored

ಮೊಗವೀರ ಸಮಾಜದ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿಗೆ ದಿಕ್ಕು ತೋರಿದ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ 31 ಅಡಿ ಎತ್ತರದ ಬೃಹತ್‌ ಕಂಚಿನ ಪುತ್ಥಳಿಯು ಕ್ಷೇತ್ರದ ಆವರಣದಲ್ಲಿ ನಿರ್ಮಾಣಗೊಂಡಿದೆ. ಸೆ.25 ರಂದು ಅನಾವರಣಗೊಳ್ಳಲಿದೆ.

Marriage AdMarriage AdSponsored

ಸುಮಾರು 3ಕೋ. ರೂ. ವೆಚ್ಚದಲ್ಲಿ 14 ಟನ್‌ ತೂಕದ ಕಂಚು ಬಳಸಿ ನಿರ್ಮಿಸಿರುವ ಈ ಪುತ್ಥಳಿಯು 8 ಅಡಿ ಎತ್ತರದ ಪ್ಲಾಟ್‌ಫಾರಂ ಮೇಲೆ 23 ಅಡಿ ಎತ್ತರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಉಚ್ಚಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ 31 ಅಡಿ ಎತ್ತರದಲ್ಲಿ ಗುರುಗಳ ಭವ್ಯ ರೂಪ ಕಂಗೊಳಿಸಲಿದೆ.