Oil Price: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಡುತ್ತಿರುವ ತೆರಿಗೆ ಆಟಕ್ಕೆ ಭಾರತದಲ್ಲಿ ಪೆಟ್ರೋಲ್ ಬೆಲೆ 8 ರಿಂದ 10 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.
Sponsoredಹೌದು, ಡೊನಾಲ್ಡ್ ಟ್ರಂಪ್ ರಷ್ಯಾದೊಂದಿಗೆ ವ್ಯಾಪಾರ ಮಾಡುವ ದೇಶಗಳಿಗೆ 100% ದ್ವಿತೀಯಕ ತೆರಿಗೆ ವಿಧಿಸುವ ಧಮಕಿಯನ್ನು ನೀಡಿದ್ದಾರೆ. ಈ ಧಮಕಿಯಿಂದ ಭಾರತದ ಕಚ್ಚಾ ತೈಲ ಪೂರೈಕೆಯ ಮೇಲೆ ಅನಿಶ್ಚಿತತೆ ಉಂಟಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ.
Marriage AdSponsoredಅಂದಹಾಗೆ ಭಾರತ ಮತ್ತು ಚೀನಾವು ರಷ್ಯಾದಿಂದ ತೈಲ ಖರೀದಿಸುವ ಪ್ರಮುಖ ದೇಶಗಳಾಗಿವೆ. ರಷ್ಯಾವು ಭಾರತಕ್ಕೆ ತೈಲ ಪೂರೈಕೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಒಟ್ಟು ಆಮದಿನ 35% ರಷ್ಯಾದಿಂದ ಬರುತ್ತದೆ. ಭಾರತದ ಖಾಸಗಿ ಕ್ಷೇತ್ರದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರ ಎನರ್ಜಿಯಂತಹ ರಿಫೈನರಿಗಳು ರಷ್ಯಾದ ತೈಲ ಖರೀದಿಯಲ್ಲಿ ಸುಮಾರು 50% ಭಾಗವಹಿಸುತ್ತವೆ. ಟ್ರಂಪ್‌ನ ತೆರಿಗೆ ಧಮಕಿಯು ಒಂದು ವೇಳೆ ಜಾರಿಗೆ ಬಂದರೆ, ರಷ್ಯಾದ ಕಚ್ಚಾ ತೈಲ ಆಮದು ಭಾರತಕ್ಕೆ ಲಾಭದಾಯಕವಾಗದಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇನ್ನು ರಷ್ಯಾವು ದಿನಕ್ಕೆ 4.5-5.0 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡುತ್ತದೆ, ಇದು ಜಾಗತಿಕ ಬಳಕೆಯ ಸುಮಾರು 5% ಆಗಿದೆ. ಈ ತೆರಿಗೆ ಧಮಕಿಯು ಭಾರತದ ಆರ್ಥಿಕತೆ ಮತ್ತು ಇಂಧನ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ತೈಲದ ಬೆಲೆ 8ರಿಂದ 10 ರೂ ಹೆಚ್ಚಳವಾಗಬಹುದು ಎನ್ನಲಾಗಿದೆ.




