ಶನಿವಾರ, 24 ಅಕ್ಟೋಬರ್ 2026

ಮುಸ್ಲಿಮರನ್ನು ‘ಜಿಹಾದಿ’ ಎಂದು ಕರೆಯುವವರು ಹರಾಮಿಗಳು – ಕಾಂಗ್ರೆಸ್ ಮುಖಂಡ ಆಕ್ರೋಶ!!

ಮುಸ್ಲಿಮರನ್ನು ‘ಜಿಹಾದಿಗಳು’ ಎಂದು ಕರೆಯುವವರು ಹರಾಮಿಗಳು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡ ಮಹಮ್ಮದ್ ಆಲಿ ತೀವ್ರವಾಗಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಸ್ಲಿಮರನ್ನು ‘ಜಿಹಾದಿಗಳು’ ಎಂದು ಕರೆಯುವವರಿಗೆ ಜಿಹಾದಿ ಎನ್ನುವ ಪದದ ಸರಿಯಾದ ಅರ್ಥವೇ ಗೊತ್ತಿಲ್ಲ. ಜಿಹಾದಿ ಎಂದರೆ ಕೆಟ್ಟದ್ದನ್ನು ಹಾಗೂ ದುರ್ಗುಣಗಳನ್ನು ತೊರೆದು ಒಳ್ಳೆಯ ಮಾರ್ಗದಲ್ಲಿ ನಡೆಯುವವರು ಎಂದರ್ಥ. ಆ ಲೆಕ್ಕಾಚಾರದಲ್ಲಿ ಮುಸ್ಲಿಮರೆಲ್ಲರೂ ಒಳ್ಳೆಯವರು ಎಂದೇ ಅರ್ಥವಾಗುತ್ತದೆ. ಆದರೆ ಈ ಪದದ ನೈಜ ಅರ್ಥ ತಿಳಿಯದೆ ಮುಸ್ಲಿಮರನ್ನು ಜಿಹಾದಿಗಳು ಎಂದು ನಿಂದಿಸುವವರು ಹರಾಮಿಗಳು” ಎಂದು ಕಿಡಿಕಾರಿದರು” ಎಂದು ಹೇಳಿದರು.

ಅಲ್ಲದೆ ಪುತ್ತೂರಿನ ದರ್ಬೆಯಲ್ಲಿ ನಡೆದ ಘಟನೆಯನ್ನು ಬಂಡವಾಳ ಮಾಡಿಕೊಂಡು ಹಿಂದೂ ಸಂಘಟನೆಯ ಕೆಲವು ಮುಖಂಡರು ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ‘ಜಿಹಾದಿಗಳು’ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿ ಮಾತನಾಡುವ ನಾಯಕರು ಮೊದಲು ಜಿಹಾದಿ ಎನ್ನುವ ಪದದ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಲಿ ಎಂದು ಮಹಮ್ಮದ್ ಆಲಿ ಸವಾಲೆಸೆದಿದ್ದಾರೆ.