ಶನಿವಾರ, 7 ನವೆಂಬರ್ 2026

ಮನೆಯ ಬಾಗಿಲು ಹಾಕುವುದನ್ನು ಮರೆತ ಯುವತಿ – ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಏನ್ ಮಾಡ್ದ ಗೊತ್ತಾ?

Advertisement
Advertisement

ಯುವತಿ ಒಬ್ಬಳು ಗಡಿಬಿಡಿ ಯಲ್ಲಿ ಮನೆಯ ಬಾಗಿಲನ್ನು ಹಾಕುವುದನ್ನು ಮರೆತು ಹೊರ ಹೋಗಿದ್ದಳು. ಈ ವೇಳೆ ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಮಾಡಿರುವ ಕಾರ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ.

Sponsored

ಯಸ್, ದಿವ್ಯಾ ಉನ್ನಿ ಎಂಬುವವರು ಯಾವುದೋ ಗಡಿಬಿಡಿಯಲ್ಲಿ ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದರು. ಆಗ ಮನೆಗೆ ಪಾರ್ಸೆಲ್ ಕೊಡಲು ಬಂದ ಅಮ್ಜಾದ್ ಎಂಬಾತ ಬಾಗಿಲು ತೆರೆದಿದ್ದನ್ನು ನೋಡಿ ಒಳಗೆ ಯಾರಿದ್ದೀರಿ, ಬಂದು ಪಾರ್ಸೆಲ್ ತೆಗೆದುಕೊಳ್ಳಿ ಎಂದು ಕೂಗಿದ್ದಾರೆ. ಎಷ್ಟು ಕರೆದರೂ ಕೂಡ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯಲ್ಲಿ ಯಾರೂ ಇಲ್ಲವೆಂಬುದು ಅಮ್ಜಾದ್ ಗೆ ಅರಿವಾಗಿದೆ.

Advertisement
Advertisement

ಬಳಿಕ ಬಂದಿದ್ದ ಪಾರ್ಸಲ್ ಅನ್ನು ಸುರಕ್ಷಿತವಾಗಿ ಮನೆಯ ಒಳಗೆ ಟೇಬಲ್ ಮೇಲಿರಿಸಿದ್ದಾರೆ. ಬಳಿಕ ದಿವ್ಯಾ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಷ್ಟಕ್ಕೇ ಸುಮ್ಮನಾಗದ ಅವರು, ದಿವ್ಯಾ ಅವರು ಮನೆಗೆ ವಾಪಸ್ ಬರುವವರೆಗೂ ಬೇರೆಲ್ಲೂ ಹೋಗದೆ ದ್ವಾರದ ಬಳಿಯೇ ಕಾವಲು ಕಾದಿದ್ದಾರೆ. 

Advertisement

ದಿವ್ಯಾ ಅವರು ಮನೆಗೆ ಬಂದಾಗ ಬಾಗಿಲ ಬಳಿ ಕಾವಲು ಕಾಯುತ್ತಿದ್ದ ಅಮ್ಜಾದ್ ಅವರ ಪ್ರಾಮಾಣಿಕತೆ ಕಂಡು ಭಾವುಕರಾಗಿದ್ದಾರೆ. ಈ ದೃಶ್ಯವನ್ನು ಅವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಡೆಲಿವರಿ ಕಂಪನಿಗೆ ಅಮ್ಜಾದ್ ಅವರಿಗೆ ಹೆಚ್ಚಿನ ವೇತನ ನೀಡುವಂತೆ ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅಮ್ಜಾದ್ ಅವರ ಮೇಲೆ ಪ್ರಶಂಸೆಯ ಮಳೆ ಸುರಿಸಿದ್ದಾರೆ.

https://www.instagram.com/reel/DXou3IUCJnn/?igsh=NDdkZjdneTAwMnVt

Advertisement
Advertisement