ಭಾನುವಾರ, 25 ಅಕ್ಟೋಬರ್ 2026

ಸಕಲೇಶಪುರ-ಸುಬ್ರಹ್ಮಣ್ಯ ಘಾಟಿಯಲ್ಲಿ ಪರೀಕ್ಷೆ ಸಕ್ಸಸ್ – ಮಂಗಳೂರಿಗೆ ವಂದೇ ಭಾರತ್ ರೈಲು ಬರೋದು ಯಾವಾಗ?

ವಂದೇ ಭಾರತ್ ರೈಲು ಹಾಸನ-ಮಂಗಳೂರು ರೈಲು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ. ಈ ಪರೀಕ್ಷೆಯು ಸಕ್ಸಸ್ ಆಗಿದ್ದು ಸದ್ಯದಲ್ಲೇ ಈ ಮಾರ್ಗವಾಗಿ ವಂದೇ ಭಾರತ ರೈಲು ಸಂಚಾರ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

Sponsored

ಆಗಸ್ಟ್ 12ರಿಂದ 14 ಮತ್ತು ಆಗಸ್ಟ್ 17ರಿಂದ 19ರವರೆಗೆ RDSO ತಂಡವು ಲಖನೌದಿಂದ ಆಗಮಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಈ ವೇಳೆ 20 ಕೋಚ್‌ಗಳ ವಂದೇ ಭಾರತ್ ರೈಲು ಬಳಸಲಾಗಿದ್ದು, ರೈಲಿಗೆ ಸ್ವಯಂಚಾಲಿತ ತುರ್ತು ಬ್ರೇಕ್ (AEB) ವ್ಯವಸ್ಥೆ ಅಳವಡಿಸಲಾಗಿತ್ತು. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ಮಾರ್ಗವು ತೀವ್ರ ಇಳಿಜಾರನ್ನು ಹೊಂದಿದ್ದು, ಈ ವಿಭಾಗದಲ್ಲಿ ರೈಲಿನ ವೇಗ ಗಂಟೆಗೆ 30 ಕಿ.ಮೀ. ಮೀರದಂತೆ ತಡೆಯಲು AEB ವ್ಯವಸ್ಥೆ ಅಗತ್ಯವಾಗಿದೆ. ರೈಲ್ವೆ ಸುರಕ್ಷತಾ ನಿಯಮಗಳ ಪ್ರಕಾರ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿದೆ.

Marriage AdMarriage AdSponsored

ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಅಂತಿಮ ಮಾರ್ಗ, ರೈಲಿನ ನಿಲ್ದಾಣಗಳು ಮತ್ತು ವೇಳಾಪಟ್ಟಿ ಕುರಿತು ರೈಲ್ವೆ ಸಚಿವಾಲಯ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ರೈಲು ಸೇವೆಯನ್ನು ಕೇವಲ ಬೆಂಗಳೂರು ಮತ್ತು ಮಂಗಳೂರು ನಡುವೆ ಮಾತ್ರ ನಡೆಸಬೇಕು ಎಂಬ ಬೇಡಿಕೆ ಒಂದು ಕಡೆಯಿದ್ದರೆ, ಕರಾವಳಿ ಕರ್ನಾಟಕದ ಸಂಪೂರ್ಣ ಭಾಗವನ್ನು ಸಂಪರ್ಕಿಸುವ ಉದ್ದೇಶದಿಂದ ರೈಲನ್ನು ಕಾರವಾರ ಅಥವಾ ಮಡಗಾಂವ್‌ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.

16 ಕೋಚ್‌ಗಳ ಹೊಸ ರೈಲಿಗಾಗಿ ನಿರೀಕ್ಷೆ

ಪ್ರಾಯೋಗಿಕ ಸಂಚಾರಕ್ಕೆ ಬಳಸಿದ 20 ಕೋಚ್‌ಗಳ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ನಿಯಮಿತ ಸೇವೆಗಾಗಿ ಉದ್ದೇಶಿತವಾಗಿರಲಿಲ್ಲ. ಆದ್ದರಿಂದ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ICF) AEB ವ್ಯವಸ್ಥೆ ಹೊಂದಿರುವ 16 ಕೋಚ್‌ಗಳ ವಂದೇ ಭಾರತ್ ರೈಲು ಆಗಮಿಸುವ ನಿರೀಕ್ಷೆಯಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು ಇದ್ದಾರೆ.