ಶನಿವಾರ, 24 ಅಕ್ಟೋಬರ್ 2026

Trump Tariff: ಸುಂಕಗಳು ಕಾನೂನುಬಾಹಿರ – ಅಮೆರಿಕದ ನ್ಯಾಯಾಲಯದ ತೀರ್ಪಿಗೆ ಟ್ರಂಪ್ ಪ್ರತಿಕ್ರಿಯೆ ಏನು?

Trump Tariff: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚಿನ ಸುಂಕಗಳು ಕಾನೂನುಬಾಹಿರ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದ ನಂತರ, ಸುಂಕಗಳು ಈಗಲೂ ಜಾರಿಯಲ್ಲಿವೆ ಎಂದು ಟ್ರಂಪ್ ಹೇಳಿದರು.

Trump Tariff: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚಿನ ಸುಂಕಗಳು ಕಾನೂನುಬಾಹಿರ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದ ನಂತರ, ಸುಂಕಗಳು ಈಗಲೂ ಜಾರಿಯಲ್ಲಿವೆ ಎಂದು ಟ್ರಂಪ್ ಹೇಳಿದರು. “ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ಸಂಪೂರ್ಣ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಶಾಲಿಯಾಗಿರಬೇಕು” ಎಂದು ಅವರು ಟೂತ್‌ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ವೇಳೆ ಟ್ರಂಪ್‌ ಅವರ ಸುಂಕಗಳು ಭಾರತವನ್ನು ಚೀನಾದೊಂದಿಗೆ ಸೇರುವಂತೆ ಮಾಡಿತು ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲ್ಲಿವನ್ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲಿನ 50% ಸುಂಕಗಳನ್ನು ಟೀಕಿಸಿದರು.

ಈ ಸುಂಕಗಳು ಅಮೆರಿಕ ಭಾರತದೊಂದಿಗೆ ನಿರ್ಮಿಸಲು ಪ್ರಯತ್ನಿಸುತ್ತಿರುವ ಆಳವಾದ ಸಂಬಂಧದ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು. “ಭಾರತೀಯರು ‘ಸರಿ, ಬಹುಶಃ ನಾವು ಬೀಜಿಂಗ್‌ಗೆ ಹೋಗಿ ಚೀನಿಯರೊಂದಿಗೆ ಕುಳಿತುಕೊಳ್ಳಬೇಕಾಗಬಹುದು ಏಕೆಂದರೆ ನಮ್ಮ ಮತ್ತು ಅಮೆರಿಕ ನಡುವೆ ಬೇಲಿಯಿದೆ’ ಎಂದು ಭಾವಿಸುತ್ತಿದ್ದಾರೆ” ಎಂದು ಜೇಕ್ ಹೇಳಿದರು.

KSCCF Recruitment 2025: ಬೆಂಗಳೂರಿನಲ್ಲಿ “ಕೆಎಸ್‌ಸಿಸಿಎಫ್ ಮಾರಾಟ ಸಹಾಯಕ ಮತ್ತು ಔಷಧತಜ್ಞ” ಹುದ್ದೆಗಳಿಗೆ ನೇಮಕಾತಿ