Home » ಜಾರಕಿಹೊಳಿ–ಸಿದ್ದರಾಮಯ್ಯ ಭೇಟಿ; ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ?

ಜಾರಕಿಹೊಳಿ–ಸಿದ್ದರಾಮಯ್ಯ ಭೇಟಿ; ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ?

0 comments

ಬೆಂಗಳೂರು: ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಹೋಟೆಲ್‌ ಅಡುಗೆ ಎಣ್ಣೆ ಕಲಬೆರಕೆಗೆ ಬ್ರೇಕ್ : ವಿಶೇಷ ಸಮಿತಿ ರಚನೆಗೆ ಖಾದರ್ ಸೂಚನೆ

ಇಬ್ಬರು ನಾಯಕರ ನಡುವಿನ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಭೇಟಿಯ ವೇಳೆ ಯಾವ ವಿಚಾರಗಳ ಕುರಿತು ಚರ್ಚೆ ನಡೆದಿದೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಆದರೆ, ಬಿಜೆಪಿ ನಾಯಕರೊಬ್ಬರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಕಾವೇರಿ ನಿವಾಸದಲ್ಲಿ ನಡೆದ ಈ ಭೇಟಿಯ ಬಳಿಕ ಉಭಯ ನಾಯಕರ ಮಾತುಕತೆಯ ವಿಚಾರಗಳು ಹಾಗೂ ಅದರ ರಾಜಕೀಯ ಮಹತ್ವದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಭೇಟಿಯ ಕುರಿತು ರಮೇಶ್ ಜಾರಕಿಹೊಳಿ ಅಥವಾ ಸಿದ್ದರಾಮಯ್ಯ ಅವರ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

You may also like