ಸೋಮವಾರ, 26 ಅಕ್ಟೋಬರ್ 2026
Trending

ಬಿಸಿ ಬಿಸಿ ಆಹಾರ ಸೇವಿಸಿ ತಣ್ಣೀರು ಕುಡಿದ ಮಹಿಳೆಗೆ ಕಾದಿತ್ತು ಶಾಕ್ – ಏನೆಂದು ತಿಳಿದರೆ ನೀವೆಂದು ಹೀಗೆ ಮಾಡಲಾರಿರಿ

ಆತುರದಲ್ಲಿ ತುಂಬಾ ಬಿಸಿಯಾದ ಆಹಾರವನ್ನು ತಿನ್ನುವುದು ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬುದು. ಅಂತೆಯೇ ಇಲ್ಲೊಬ್ಬರು ಮಹಿಳೆ ಬಿಸಿಬಿಸಿಯಾದ ಆಹಾರವನ್ನು ಸೇವಿಸಿದ ಬಳಿಕ ತಣ್ಣೀರನ್ನು ಕುಡಿದಿದ್ದಾರೆ. ಹೀಗೆ ತಣ್ಣೀರು ಸೇವಿಸಿದ ಮಹಿಳೆಗೆ ನಂತರದಲ್ಲಿ ದೊಡ್ಡ ಅಘಾತವೇ ಎದುರಾಗಿದೆ.

Sponsored

ಚೀನಾದ ಮಹಿಳೆಯೊಬ್ಬಳು ಬಿಸಿ ಇರುವ ಹಾಟ್​ಪಾಟ್​ (Hotpot Danger) ಸೇವಿಸಿದ್ದಾರೆ. ಊಟವಾದ ನಂತರ ಅವಳಿಗೆ ಎದೆ ಮತ್ತು ಗಂಟಲಲ್ಲಿ ತೀವ್ರ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಆಗ ಇದು ಅಸ್ವಸ್ಥತೆ ಎಂದು ನಂಬಿ, ನೋವು ಕಡಿಮೆ ಮಾಡಲೆಂದು ಅವಳಿಗೆ ಐಸ್​ ನೀರನ್ನು ಕುಡಿಸಿದ್ದಾರೆ. ಆದರೆ, ರಾತ್ರಿಯಿಡೀ ಆಕೆಯ ಸ್ಥಿತಿ ಹದಗೆಟ್ಟಿತು. ಮರುದಿನ ಆಕೆಗೆ ನೀರು ಕೂಡಾ ನುಂಗಲು ಕಷ್ಟವಾದುದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಪ್ರೀಕ್ಷಿಸಿದ ವೈದ್ಯರು ಅನ್ನನಾಳದಲ್ಲಿ 8 ಸೆಂಟಿ ಮೀಟರ್​ಗಳಷ್ಟು ಅಲ್ಸರ್​ ಆಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

ಅನೇಕ ಜನರು ಗಂಟಲು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು ಎಂದು ಭಾವಿಸುತ್ತಾರೆ. ಆದರೆ, ಅನ್ನನಾಳದ ಒಳಪದರವು ಸುಮಾರು 50-60 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮಾತ್ರ ತಡೆದುಕೊಳ್ಳಬಲ್ಲದು ಎಂದು ವೈದ್ಯರು ಸೂಚಿಸುತ್ತಾರೆ. ಹೊಸದಾಗಿ ಬೇಯಿಸಿದ ಹಾಟ್‌ಪಾಟ್ ವಸ್ತುಗಳು 80 ರಿಂದ 90 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ತಲುಪಬಹುದು. ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ದೇಹದ ಒಳಭಾಗದಲ್ಲಿ ಸುಟ್ಟಗಾಯಗಳಾಗಬಹುದು. ಹೀಗಾಗಿ ಆಹಾರ ಸೇವನೆ ಹಾಗೂ ನೀರು ಕುಡಿಯುವ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

Advertisement