ಭಾನುವಾರ, 25 ಅಕ್ಟೋಬರ್ 2026

ಮನೆಯ ಹಿಂಭಾಗದಲ್ಲೇ ಕಾದಿತ್ತು ಅಪಾಯ: ಕಜ್ಜದ ಹುಳು ಕಚ್ಚಿ ಬಾಲಕ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹತ್ತಿಸರ ಗ್ರಾಮದಲ್ಲಿ ಕಜ್ಜದ ಹುಳು ಕಚ್ಚಿ 8 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

Sponsored

Marriage AdMarriage AdSponsored

ನಿಕೋಟಿನ್‌ ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮ – ಖಾದರ್

ಹತ್ತಿಸರ ಗ್ರಾಮದ ನಿಷ್ಮಿತ್ (8) ಮೃತ ಬಾಲಕ. ಮನೆ ಹಿಂಭಾಗದಲ್ಲಿದ್ದ ಬಾಳೆಗಿಡದಲ್ಲಿ ಕಜ್ಜದ ಹುಳುವಿನ ಗೂಡು ಇತ್ತು ಎನ್ನಲಾಗಿದ್ದು, ಇದೇ ವೇಳೆ ಬಾಲಕನಿಗೆ ಹುಳು ಕಚ್ಚಿದೆ ಎಂದು ತಿಳಿದುಬಂದಿದೆ. ವಿಷಕಾರಿ ಹುಳುವಿನ ಕಚ್ಚುವಿಕೆಯಿಂದ ಅಸ್ವಸ್ಥಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ನಿಕೋಟಿನ್‌ ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮ – ಖಾದರ್

ಘಟನೆಯಲ್ಲಿ ನಿಷ್ಮಿತ್ ತಂದೆ ವೆಂಕಟೇಶ್ ಅವರಿಗೂ ಕಜ್ಜದ ಹುಳು ಕಚ್ಚಿದ್ದು, ಅವರನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.