ಭಾನುವಾರ, 25 ಅಕ್ಟೋಬರ್ 2026
Trending

RBI ನಿಂದ 700 ರೂಪಾಯಿ ನೋಟು ಬಿಡುಗಡೆ?

ಭಾರತೀಯ ರಿಸರ್ವ್ ಬ್ಯಾಂಕ್ (RBI)  ಶೀಘ್ರದಲ್ಲೇ 700 ರೂಪಾಯಿಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ತರಲಿದೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ.

Sponsored

ಸಧ್ಯ, 700 ರೂಪಾಯಿ ನೋಟಿನ ಫೋಟೋ

ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಹೊಸ ವಿನ್ಯಾಸದ ನೋಟಿನ ಚಿತ್ರವನ್ನು ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಈ ಹೊಸ ಬದಲಾವಣೆಯ ಬಗ್ಗೆ ಭಾರೀ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. 

ಆದರೆ, ಆರ್‌ಬಿಐ ಇಂತಹ ಯಾವುದೇ ಹೊಸ ನೋಟುಗಳನ್ನು ಬಿಡುಗಡೆ ಮಾಡುತ್ತಿಲ್ಲ. ಇದು ನಕಲಿ ನೋಟು ಆಗಿದೆ.  ವೈರಲ್ ಆಗುತ್ತಿರುವ ಈ 700 ರೂಪಾಯಿ ನೋಟಿನ ಚಿತ್ರ ಸಂಪೂರ್ಣವಾಗಿ ನಕಲಿಯಾಗಿದ್ದು, ಇದನ್ನು ಕಂಪ್ಯೂಟರ್ ಅಥವಾ ಮೊಬೈಲ್ ಆಪ್‌ಗಳ ಮೂಲಕ ಎಡಿಟ್ ಮಾಡಿ ಸೃಷ್ಟಿಸಲಾಗಿದೆ ಎನ್ನಲಾಗಿದೆ.

ಆರ್‌ಬಿಐ ನಿಯಮಗಳ ಪ್ರಕಾರ ಪ್ರಸ್ತುತ ಭಾರತದಲ್ಲಿ 10, 20, 50, 100, 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿ 700 ರೂಪಾಯಿಯ ಹೊಸ ನೋಟನ್ನು ಪರಿಚಯಿಸುವ ಯಾವುದೇ ಪ್ರಸ್ತಾಪ ಅಥವಾ ಯೋಜನೆ ಕೇಂದ್ರ ಬ್ಯಾಂಕ್‌ನ ಮುಂದಿಲ್ಲ ಎಂದು ಬ್ಯಾಂಕಿಂಗ್ ಮೂಲಗಳು ಸ್ಪಷ್ಟಪಡಿಸಿವೆ.