ಭಾನುವಾರ, 25 ಅಕ್ಟೋಬರ್ 2026

Marriage :ಟೀ ಸರ್ವ್ ಮಾಡುವ ಸ್ಟೈಲ್ ಗೆ ಫಿದಾ – ಶಾಲಾ ಅಟೆಂಡರ್ ಅನ್ನೇ ಮದುವೆಯಾದ ಪ್ರಿನ್ಸಿಪಲ್

Marriage : ಶಾಲೆಯೊಂದರ ಪ್ರಿನ್ಸಿಪಾಲ್ ಫರ್ಜಾನಾ, ಅದೇ ಶಾಲೆಯ ಅಟೆಂಡರ್ ಫಯಾಜ್ ಅವರನ್ನು ವಿವಾಹವಾಗಿದ್ದಾರೆ. ಕಾರಣ ಫಯಾಜ್ ಅವರ ಕೆಲಸದ ಶೈಲಿ ಮತ್ತು ಚಹಾ ನೀಡುವ ಸಭ್ಯತೆಗೆ ಮನಸೋತ ಪ್ರಿನ್ಸಿಪಾಲ್, ತಾವೇ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟು ಈ ಅಪರೂಪದ ಪ್ರೇಮಕ್ಕೆ ನಾಂದಿ ಹಾಡಿದ್ದಾರೆ. ಪ್ರೀತಿಗೆ ಯಾವುದೇ ಗಡಿಗಳಿಲ್ಲ, ಅಂತಸ್ತಿನ ಹಂಗಿಲ್ಲ ಎಂಬ ಮಾತಿಗೆ ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. 

Sponsored

ಫಯಾಜ್ ಅದೇ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಪ್ರಿನ್ಸಿಪಾಲ್ ಫರ್ಜಾನಾ ಅವರಿಗೆ ಚಹಾ ನೀಡುವಾಗ ಫಯಾಜ್ ತೋರುತ್ತಿದ್ದ ಸಭ್ಯತೆ, ಗೌರವ ಮತ್ತು ಅವರ ಕೆಲಸದ ಶೈಲಿ ಫರ್ಜಾನಾ ಅವರ ಮನಗೆದ್ದಿತ್ತು. ಫಯಾಜ್ ಅವರ ಸರಳತೆ ಮತ್ತು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮನಸೋತ ಪ್ರಿನ್ಸಿಪಾಲ್, ಅವರ ಮೇಲೆ ಪ್ರೀತಿ ಬೆಳೆಸಿಕೊಂಡರು.  ಸಾಮಾನ್ಯವಾಗಿ ಪುರುಷರು ಪ್ರೇಮ ನಿವೇದನೆ ಮಾಡುವುದು ವಾಡಿಕೆ. ಆದರೆ ಇಲ್ಲಿ ಪ್ರಿನ್ಸಿಪಾಲ್ ಫರ್ಜಾನಾ ಅವರೇ ಧೈರ್ಯ ಮಾಡಿ ಫಯಾಜ್ ಅವರಿಗೆ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಮೊದಮೊದಲು ಫಯಾಜ್ ಅವರು ಈ ಪ್ರಸ್ತಾಪದಿಂದ ಆಶ್ಚರ್ಯಚಕಿತರಾದರೂ, ನಂತರ ಫರ್ಜಾನಾ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ

Marriage AdMarriage AdSponsored

ತಮ್ಮ ವಿಶಿಷ್ಟ ಪ್ರೇಮಕಥೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿನ್ಸಿಪಾಲ್ ಫರ್ಜಾನಾ, “ಫಯಾಜ್ ಕೆಲಸ ಮಾಡುವ ರೀತಿ ಮತ್ತು ಅವರು ನನಗೆ ಚಹಾ ನೀಡುತ್ತಿದ್ದ ಆ ಸಭ್ಯತೆಯ ಶೈಲಿಯನ್ನು ಕಂಡು ನಾನು ಪ್ರೀತಿಯಲ್ಲಿ ಬಿದ್ದೆ. ನಂತರ ನಾನೇ ಧೈರ್ಯ ಮಾಡಿ ಅವರಿಗೆ ಮದುವೆಯ ಪ್ರಸ್ತಾವನೆಯನ್ನು (Propose) ಮುಂದಿಟ್ಟೆ. ಅವರು ಅದನ್ನು ತಕ್ಷಣವೇ ಒಪ್ಪಿಕೊಂಡರು” ಎಂದು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.