ಶನಿವಾರ, 24 ಅಕ್ಟೋಬರ್ 2026

ಸಿಎಂ ಡಿಕೆಶಿ ಭೇಟಿ ಎಫೆಕ್ಟ್ – ಮಂಗಳೂರಲ್ಲಿ ಗಗನಕ್ಕೇರಿದ ‘ಕಾಣೆ’ ಮೀನಿನ ದರ!!

ಇತಿಹಾಸದಲ್ಲಿ ಮೊದಲೆಂಬಂತೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಈ ವೇಳೆ ಮುಖ್ಯಮಂತ್ರಿಗಳು ಅಂದು ಬೆಳಗಿನ ಉಪಾಹಾರವನ್ನು ಮಂಗಳೂರಿನ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಮುಖ್ಯಮಂತ್ರಿಗಳು ಅಲ್ಲಿನ ಯುವ ಕಂಟೆಂಟ್ ಕ್ರಿಯೇಟರ್ಸ್ ಗಳ ಜೊತೆ ಮಾತನಾಡಿದ್ದರು. ಈ ವೇಳೆ ಮಂಗಳೂರು ಫುಡ್ ಗೆ ವರ್ಲ್ಡ್ ಫೇಮಸ್, ಇಲ್ಲಿನ ಫುಡ್ ನ್ನು ನೀವು ಈ ಹಿಂದೆ ಟೇಸ್ಟ್ ಮಾಡಿದ್ದೀರಾ, ಯಾವುದಾದರೂ ಒಂದು ಮಂಗಳೂರು ಫುಡ್ ಇಡೀ ಕರ್ನಾಟಕದಲ್ಲಿ ಸಿಗ್ಬೇಕು ಅಂದ್ರೆ ಅದು ಯಾವುದು ಸರ್ ಎಂದು ಕೇಳಿದ್ದರು. ಥಟ್ಟನೇ ಮುಖ್ಯಮಂತ್ರಿಗಳು ನಗುತ್ತಾ ಕಾಣೆ ಫಿಶ್, ನೀವು ಕಾಣೆ ಫಿಶ್ ಟೇಸ್ಟ್ ಗೆ ಯಾವುದನ್ನೂ ಮ್ಯಾಚ್ ಮಾಡೋಕೆ ಆಗಲ್ಲ ಅಂದರು. 

ಮುಖ್ಯಮಂತ್ರಿಗಳು ಕಾಣೆ ಮೀನಿನ ಆಹಾರ ತುಂಬಾ ರುಚಿ ಎಂದು ಹೊಗಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ, ಕೆಜಿಗೆ 700 ರಿಂದ 800 ರೂಪಾಯಿ ಇದ್ದ ಕಾಣೆ ಮೀನು ರೇಟು ಈಗ 1100 ರಿಂದ 1200 ರೂಪಾಯಿ ಆಗಿದೆ. ಸಿಎಂ ಇಂದ ಕಾಣೆ ಫಿಶ್ ರೇಟ್ ಜಾಸ್ತಿಯಾಯ್ತು ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.