ಶನಿವಾರ, 24 ಅಕ್ಟೋಬರ್ 2026

ಪ್ರಲ್ಹಾದ್ ಜೋಶಿಗೆ ಶಿಕ್ಷಣ ಸಚಿವ ಜವಾಬ್ದಾರಿ – ಕೇಂದ್ರ ಸರ್ಕಾರ ಘೋಷಣೆ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಹೋರಾಡಿದ CJP ಹಾಗೂ ಪ್ರತಿಪಕ್ಷಗಳು ಕೊನೆಗೂ ಜಯ ಸಾಧಿಸಿವೆ. ಇದರ ಬೆನ್ನಲ್ಲೇ ಇದೀಗ ಈ ಶಿಕ್ಷಣ ಸಚಿವ ಸ್ಥಾನದ ಜವಾಬ್ದಾರಿಯನ್ನು ಪ್ರಹ್ಲಾದ್ ಜೋಶಿಗೆ ನೀಡಲಾಗಿದೆ.

ಕೇಂದ್ರ ಆಹಾರ ಮತ್ತು ನಾಗರೀಕ ಸಚಿವರಾಗಿರುವ ಪ್ರಹ್ಲಾದ್ ಜೋಶಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಹ್ಲಾದ್ ಜೋಶಿ ಅವರು ಪ್ರಧಾನ ನರೇಂದ್ರ ಮೋದಿ ಅವರ ಆಪ್ತ ಬಳಗದಲ್ಲಿ ಪ್ರಬಲ ಸಚಿವರಲ್ಲಿ ಒಬ್ಬರು. ಇದೀಗ ಇಡೀ ದೇಶದ ಚಿತ್ತ ಪ್ರಹ್ಲಾದ್ ಜೋಶಿ ಮೇಲೆ ನೆಟ್ಟಿದೆ.