Home » ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ, ಫೋಟೋಗಳು ಪತ್ತೆ

ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ, ಫೋಟೋಗಳು ಪತ್ತೆ

0 comments

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆ ಸಿಸಿಬಿ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಅದರಲ್ಲೂ ಅನೇಕ ಅಶ್ಲೀಲ ವಿಡಿಯೋ, ಫೋಟೋ ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ.

ಹೌದು, ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ಸಿಕ್ಕ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು, ಪತ್ರಿಕೆಯಲ್ಲಿನ ಯುವತಿಯರ ಅಶ್ಲೀಲ ಫೋಟೋಗಳ ಕಟಿಂಗ್ ಗಳು ಪತ್ತೆಯಾಗಿವೆ. ಹೀಗಾಗಿ ಪ್ರಜ್ವಲ್ ರೇವಣ್ಣನನ್ನು VIP ಸೆಲ್​​​​ನಿಂದ ಜನರಲ್ ಸೆಲ್​​​​ಗೆ ಸ್ಥಳಾಂತರ ಮಾಡಲಾಗಿದೆ. ಪರಿಶೀಲನೆ ವೇಳೆ ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ರೆಡ್ ಮಿ ಮೊಬೈಲ್ ಮತ್ತು ಚಾರ್ಜರ್, ಪೆನ್ ಡ್ರೈವ್ ಮತ್ತು ಪಾಕೆಟ್ ನೋಟ್ ಬುಕ್ ಪತ್ತೆಯಾಗಿವೆ ಎಂದು ವರದಿಯಾಗಿದೆ. ಅತ್ಯಾ೧ಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಎರಡು ವರ್ಷಗಳು ಉರುಳಿದರೂ ಪ್ರಜ್ವಲ್‌ ಬದಲಾಗಿಲ್ಲ ಎಂಬುದನ್ನು ಇದು ತೋರಿಸುತ್ತಿದೆ.

ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್​​​​​ನಲ್ಲಿ ಕೇವಲ ಅಶ್ಲೀಲ ವಿಡಿಯೋಗಳು ಜೊತೆಗೆ ಆಡಿಯೋ ಸಂಭಾಷಣೆ ಸಹ ಸಿಕ್ಕಿದೆ. ಹೊರಗಡೆ ಬಾ, ನಾನು ಅವರಿಗೆ ಪೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ. ಅತ್ತುಕೊಂಡು ಕೂತ್ತಿದ್ರು ನೀನು ಪೋನ್ ಮಾಡಿಲ್ಲ. ಏನ್ ಮಾಡ್ತಿದ್ದೆ, ಎಂದು ಅಪರಿಚಿತರೊಂದಿಗೆ ಮಾತನಾಡಿದ ಪೋನ್ ಸಂಭಾಷಣೆ ಸಿಕ್ಕಿದೆ. ಆದರೆ, ಯಾರ ಜೊತೆ ಮಾತನಾಡಿದ್ದು ಎನ್ನುವುದು ಗೊತ್ತಾಗಿಲ್ಲ.

ಅಕ್ರಮ ಚಟುವಟಿಕೆಗಳ ಶಂಕೆಯ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದರು. ಆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್‌ ರಾಯ್‌ ಇರುವ ಸೆಲ್‌ನಲ್ಲಿ ಮೊಬೈಲ್‌, ಪೆನ್‌ಡ್ರೈವ್‌, ಮೊಬೈಲ್ ಚಾರ್ಜ್‌ ಹಾಗೂ ನೋಟ್ ಬುಕ್ ಸಿಕ್ಕಿದೆ. ಈ ಸಂಬಂಧ ಸಿಸಿಬಿ ಮಾದಕ ವಸ್ತು ದ್ರವ್ಯ ನಿಗ್ರಹ ದಳದ ಇನ್ಸ್‌ಪೆಕ್ಟರ್‌ ಎಂ.ಎಲ್‌.ಸುಬ್ರಹ್ಮಣ್ಯ ನೀಡಿದ ದೂರಿನ ಮೇರೆಗೆ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

You may also like