ದೇಶದಲ್ಲಿ ನಗದು ಹಣದ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ನಡುವೆ ಬ್ಯಾಂಕ್ ನೋಟುಗಳ ಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ‘ಪಾಲಿಮರ್’ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದೆ ಎಂದು ಈ ಹಿಂದೆ ವಾರದಿಯಾಗಿತ್ತು. ಇದೀಗ ನೋಟು ಮುದ್ರಣಕ್ಕೆ ಬೇಕಾಗುವ ಪಾಲಿಮರ್ ಹಾಳೆಗಳ ಪೂರೈಕೆಗೆ ಜಾಗತಿಕ ಟೆಂಡರ್ ಅನ್ನು ಆಹ್ವಾನಿಸಿದೆ. ಈ ಪ್ಲಾಸ್ಟಿಕ್ ನೋಟುಗಳ ವಿಶೇಷತೆ ಏನು ಈಗಿರುವ ಕಾಗದ ನೋಟುಗಳ ಕಥೆ ಏನು? ಅವುಗಳನ್ನು ಏನು ಮಾಡಬೇಕು?
Sponsoredಹೌದು, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ (BRBNMPL) ನ ಟೆಂಡರ್, ಕರೆನ್ಸಿ ನೋಟುಗಳನ್ನು ಮುದ್ರಿಸಲು ಬಳಸಲಾಗುವ 3.4 ಕೋಟಿ ಪಾಲಿಮರ್ ಹಾಳೆಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಆಹ್ವಾನಿಸಿದೆ. ಇವು ಕೇವಲ ಹಳೆಯ ಪ್ಲಾಸ್ಟಿಕ್ ಹಾಳೆಗಳಲ್ಲ, ವಿಶೇಷ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ. 3.4 ಕೋಟಿ ಹಾಳೆಗಳು ತಕ್ಷಣದ ಅವಶ್ಯಕತೆ ಎಂದು ಟೆಂಡರ್ ಹೇಳಿದೆ. ಪ್ರಯೋಗಗಳು ಯಶಸ್ವಿಯಾದ ನಂತರ, BRBNMPL ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಯೋಜನೆ ರೂಪಿಸಲಾಗಿದೆ. ಪಾಲಿಮರ್ ಹಾಳೆಗಳ ಒಟ್ಟು 68 ಸಾವಿರ ರೀಮ್‌ಗಾಗಿ ಬಿಆರ್‌ಬಿಎನ್‌ಎಂಪಿಎಲ್ ಟೆಂಡರ್ ಆಹ್ವಾನಿಸಿದೆ. ಒಂದು ರೀಮು 500 ಹಾಳೆಗಳನ್ನು ಒಳಗೊಂಡಿರುತ್ತದೆ. ಒಂದು ಮುಖಬೆಲೆಯ ನೋಟಿನ ಮುದ್ರಣಕ್ಕೆ 34 ಸಾವಿರ ರೀಮ್‌ಗಳು ಬೇಕಾಗುತ್ತವೆ.
ಪ್ರಯೋಜನ ಏನು?
* ಹೆಚ್ಚು ಬಾಳಿಕೆ: ಕಾಗದದ ನೋಟುಗಳಿಗಿಂತ ಪ್ಲಾಸ್ಟಿಕ್ ನೋಟುಗಳು ಹೆಚ್ಚು ಬಾಳಿಕೆ ಬರುತ್ತವೆ. ಈ ಬಾಳಿಕೆಯು ನೋಟುಗಳ ಮುಖಬೆಲೆಯನ್ನು ಅವಲಂಬಿಸಿರುತ್ತದೆ. ಸಣ್ಣ ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಚಲಾವಣೆ ಮಾಡಲಾಗುತ್ತದೆ. ಹೀಗಾಗಿ, ಅವುಗಳ ಬಾಳಿಕೆ ಕಡಿಮೆ ಇರುತ್ತದೆ.
* ತಯಾರಿಕಾ ವೆಚ್ಚ ಕಡಿಮೆ: ಪ್ಲಾಸ್ಟಿಕ್ ನೋಟುಗಳು ಹೆಚ್ಚಿನ ಅವಧಿ ಬಾಳಿಕೆ ಬರುವುದರಿಂದ, ತಯಾರಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತಯಾರಿಕಾ ವೆಚ್ಚಗಳು ಕಡಿಮೆಯಾಗುತ್ತವೆ.
ಹಳೆಯ ನೋಟುಗಳ ಕಥೆ ಏನು?
ಪ್ಲಾಸ್ಟಿಕ್ ನೋಟುಗಳು ಬಂದಾಕ್ಷಣ ಹಳೆಯ ಕಾಗದದ ನೋಟುಗಳು ಅಮಾನ್ಯವಾಗಲ್ಲ. ಮಾರುಕಟ್ಟೆಯಲ್ಲಿ ಎರಡೂ ಬಗೆಯ ನೋಟುಗಳು ಚಲಾವಣೆಯಲ್ಲಿ ಇರುತ್ತವೆ.




