ಸೋಮವಾರ, 26 ಅಕ್ಟೋಬರ್ 2026
Trending

ಮಲ್ಲಮ್ಮನನ್ನು ಬಿಗ್ ಬಾಸ್ ಮನೆಗೆ ಕಳಿಸಿದ್ದ ಪಲ್ಲವಿ ಇನ್ನಿಲ್ಲ

ಬಿಗ್ ಬಾಸ್ ಮನೆಗೆ ಹೋಗಿ ಖ್ಯಾತಿಗಳಿಸಿದ ಮಲ್ಲಮ್ಮ ಅವರಿಗೆ ಕೆಲಸ ಕೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫೇಮಸ್ ಮಾಡಿ, ಅವರು ಬಿಗ್ ಬಾಸ್ ಮನೆಗೆ ಹೋಗಲು ಕಾರಣಕರ್ತರಾಗಿದ್ದ ಪಲ್ಲವಿ ಅವರು ನಿಧನರಾಗಿದ್ದಾರೆ.

Sponsored

ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ ‘ರಿಷಿ ಡಿಸೈನ್’ ಸಂಸ್ಥೆಯ ಸಂಸ್ಥಾಪಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ನಿಧನರಾಗಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಬೋಟಿಕ್‌ನಲ್ಲಿ ಕೆಲಸ ಕೊಟ್ಟು, ಅವರು ಬಿಗ್ ಬಾಸ್ ವೇದಿಕೆ ಏರುವವರೆಗೆ ಪ್ರಮುಖ ಶಕ್ತಿಯಾಗಿ ನಿಂತಿದ್ದರು. ಪಲ್ಲವಿ ಅವರ ಸಾವಿನ ಹಿಂದಿನ ಕಾರಣ ಇನ್ನು ತಿಳಿದು ಬಂದಿಲ್ಲ. ಸದ್ಯ ಪಲ್ಲವಿ ಅವರ ಹಠಾತ್ ಅಗಲಿಕೆ ಕಿರುತೆರೆ ಲೋಕಕ್ಕೆ ತೀವ್ರ ಆಘಾತ ತಂದಿದೆ.

ಪಲ್ಲವಿ ಅವರು ಕೇವಲ ಬೋಟಿಕ್ ಮಾಲೀಕರಷ್ಟೇ ಅಲ್ಲದೆ, ಚಂದನವನದ ಖ್ಯಾತ ನಟ-ನಟಿಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದ ಜನಪ್ರಿಯ ಫ್ಯಾಷನ್ ಡಿಸೈನರ್ ಆಗಿದ್ದರು. ‘ರಿಷಿ ಡಿಸೈನ್’ ಮೂಲಕ ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿ, ತಮ್ಮ ಮುಗ್ಧತೆಯಿಂದ ಇಡೀ ಕರ್ನಾಟಕದ ಜನರ ಮನಗೆದ್ದಿದ್ದ ಮಲ್ಲಮ್ಮ ಅವರ ಈ ಸಾಧನೆಯ ಹಿಂದೆ ಪಲ್ಲವಿ ಅವರ ಪಾತ್ರ ಬಹಳ ದೊಡ್ಡದಿತ್ತು. ಉತ್ತರ ಕರ್ನಾಟಕದಿಂದ ಬಂದ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ಫ್ಯಾಷನ್ ಬೋಟಿಕ್‌ನಲ್ಲೇ ಕೆಲಸ ನೀಡಿದ್ದರು. ಮಲ್ಲಮ್ಮ ಅವರನ್ನು ಕೇವಲ ಕೆಲಸದಾಕೆಯಂತೆ ನೋಡದೆ, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಸದ್ಯ ಪಲ್ಲವಿ ಅವರ ಸಾವು ಎಲ್ಲರಿಗಿಂತ ಹೆಚ್ಚಾಗಿ ಮಲ್ಲಮ್ಮ ಅವರಿಗೆ ಆಘಾತ ಉಂಟು ಮಾಡಿದೆ.