Padubidri: ತಡೆರಹಿತ ಬಸ್ ಚಾಲಕ ತನ್ನ ಕಾರನ್ನು ಓವರ್ಟೇಕ್ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡ ಖಾಸಗಿ ಕಾರಿನ ವ್ಯಕ್ತಿಯೋರ್ವ ಸೋಮವಾರ ಬೆಳಿಗ್ಗೆ ಬಸ್ ಚಾಲಕನ ಮೇಲೆ ಬಸ್ಸಿನೊಳಗೆ ನುಗ್ಗಿ ಹಲ್ಲೆ ನಡೆಸಿದ ಘಟನೆಯೊಂದು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ.
Sponsoredಮುಲ್ಕಿಯ ಇಸ್ಮಾಯಿಲ್ ಅತೀಕ್ (41) ಆರೋಪಿ. ಬಸ್ ಚಾಲಕ ಶೈಲೇಂದ್ರ ಯಾನೆ ಶೈಲು ಎಂದು ಗುರುತಿಸಲಾಗಿದೆ.
ಈ ಘಟನೆ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ರಸ್ತೆ ಬದಿಯ ಚಿಕನ್ ಶೋರ್ಮಾ ತಿಂದು 12 ಮಂದಿ ಆಸ್ಪತ್ರೆಗೆ ದಾಖಲು





Comments are closed.