ವಿವೇಕಾನಂದ ಕಾಲೇಜಿನಲ್ಲಿ ಎಂಬಿಎ ಪ್ರವೇಶ ಪರೀಕ್ಷೆಗಳ ಕುರಿತು ದೃಷ್ಟಿಕೋನ ಕಾರ್ಯಕ್ರಮ
ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಶಿಕ್ಷಣದೊಂದಿಗೆ ನಿರ್ವಹಣಾ ಕೌಶಲ್ಯಗಳು ಬಹಳ ಅಗತ್ಯ. ಎಂಬಿಎ ಪದವಿಯು ವೃತ್ತಿಪರ ಅರ್ಹತೆಯಾಗಿದೆ. ಅಲ್ಲಿ ಬೋಧಿಸುವ ಅಧ್ಯಾಪಕರ ವಿಷಯ ಜ್ಞಾನ, ಅನುಭವ, ಹಾಗೂ ಪ್ರಾಯೋಗಿಕ ಪರಿಣತಿಯು ಶಿಕ್ಷಣದ ಗುಣಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಂಬಿಎ ಪೂರ್ಣಗೊಳಿಸಲು ಹಲವು ದಾರಿಗಳಿದ್ದು, ಕರ್ನಾಟಕದ ವಿದ್ಯಾರ್ಥಿಗಳಿಗೆ ಇರುವ ಅತ್ಯುತ್ತಮ ಹಾದಿ ಎಂದರೆ ಕರ್ನಾಟಕ ಪಿಜಿಸಿಇಟಿ.
Sponsoredಇದು ನಿರ್ವಹಣಾ ಸಾಮರ್ಥ್ಯ ಪರೀಕ್ಷೆಯಾಗಿದೆ. ಈ ಮೂಲಕ ಸರ್ಕಾರಿ ಕೋಟಾದಲ್ಲಿ ಕಡಿಮೆ ಶುಲ್ಕದಲ್ಲಿ ಎಂಬಿಎ ಪದವಿಯನ್ನು ವಿದ್ಯಾರ್ಥಿಗಳು ಪೂರ್ಣಗೊಳಿಸಬಹುದು ಎಂದು ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ವಾಣಿಜ್ಯ, ವ್ಯವಹಾರ ಆಡಳಿತ ಹಾಗೂ ಐಕ್ಯೂಎಸಿ ಘಟಕದ ಸಹಯೋಗದ ‘ಎಂಬಿಎ ಪ್ರವೇಶ ಪರೀಕ್ಷೆಗಳ ಕುರಿತು ದೃಷ್ಟಿಕೋನ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ ಪಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕಿ ಹಾಗೂ ಕಾಮರ್ಸ್ ವಿಭಾಗದ ಡೀನ್ ಡಾ. ರವಿಕಲಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿನಿ ದೀಪ್ತಿ ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿನಿ ಧನಲಕ್ಷಿö್ಮ ವಂದಿಸಿ, ತೃತೀಯ ಬಿ. ಕಾಂ ವಿದ್ಯಾರ್ಥಿನಿ ಚೈತ್ರಾ ನಿರೂಪಿಸಿದರು.




