ಶನಿವಾರ, 24 ಅಕ್ಟೋಬರ್ 2026

Cough syrups: 3 ವಿಷಕಾರಿ ಕೆಮ್ಮಿನ ಸಿರಪ್‌ಗಳಲ್ಲಿ ಯಾವುದನ್ನೂ ರಫ್ತು ಮಾಡಿಲ್ಲ: ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ

Cough syrups: ಕಳೆದ ತಿಂಗಳು ಕನಿಷ್ಠ 17 ಮಕ್ಕಳು ಸಾವನ್ನಪ್ಪಿದ ನಂತರ ಭಾರತವು ಮೂರು ಕೆಮ್ಮಿನ ಸಿರಪ್‌ಗಳನ್ನು ವಿಷಕಾರಿ ಎಂದು ಘೋಷಿಸಿದೆ.

Cough syrups: ಕಳೆದ ತಿಂಗಳು ಕನಿಷ್ಠ 17 ಮಕ್ಕಳು ಸಾವನ್ನಪ್ಪಿದ ನಂತರ ಭಾರತವು ಮೂರು ಕೆಮ್ಮಿನ ಸಿರಪ್‌ಗಳನ್ನು ವಿಷಕಾರಿ ಎಂದು ಘೋಷಿಸಿದೆ. ಎಲ್ಲಾ ಸಾವುಗಳು ಕೋಲ್ಡ್ರಿಫ್‌ಗೆ ಸಂಬಂಧಿಸಿವೆಯಾದರೂ, ವಿಶ್ವದ ಮೂರನೇ ಅತಿದೊಡ್ಡ ಔಷಧ ಉತ್ಪಾದಿಸುವ ದೇಶದ ನಿಯಂತ್ರಕರು, ಗ್ರಾಹಕರು, ರೆಸ್ಪಿಫ್ರೆಶ್ ಟಿಆರ್ ಮತ್ತು ರೀಲೈಫ್ ಅನ್ನು ಸಹ ತಪ್ಪಿಸುವಂತೆ ಕೇಳಿಕೊಂಡಿದ್ದಾರೆ.

ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯು ಅನಿಯಂತ್ರಿತ ಮಾರ್ಗಗಳ ಮೂಲಕ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಸಿದೆ. ವಿಷಕಾರಿ ಎಂದು ಘೋಷಿಸಲಾದ ಮೂರು ಕೆಮ್ಮಿನ ಸಿರಪ್‌ಗಳಾದ ಕೋಲ್ಸಿಫ್, ರೆಸ್ಪಿಫ್ರೆಶ್ ಟಿಆ‌ರ್ ಮತ್ತು ರಿಲೈಫ್ ಅಲ್ಲಿ ಯಾವುದನ್ನೂ ರಫ್ತು ಮಾಡಿಲ್ಲ ಎಂದು ಭಾರತೀಯ ಅಧಿಕಾರಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದ್ದಾರೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಮಕ್ಕಳ ಸಾವಿಗೆ ಕೋಲ್ಸಿಫ್ ಕಾರಣವಾಗಿದೆ. ಔಷಧದಲ್ಲಿ ಅನುಮತಿಸಲಾದ ಮಿತಿಗಿಂತ 500 ಪಟ್ಟು ಹೆಚ್ಚು ಡೈಥಿಲೀನ್ ಗ್ಲೀಕೋಲ್ ಇತ್ತು. ಸಿರಪ್ ಅನ್ನು ನಿಷೇಧಿಸಲಾಗಿದೆ ಮತ್ತು ಕಂಪನಿಯ ಮಾಲೀಕರನ್ನು ಬಂಧಿಸಲಾಗಿದೆ . ಈ ಬಗ್ಗೆ ರಾಯಿಟರ್ಸ್‌ನಿಂದ ಮಾಡಿದ ಕರೆಗಳಿಗೆ ಮಾಲೀಕರು ಮತ್ತು ಕಂಪನಿಯು ಉತ್ತರಿಸಿಲ್ಲ.