ಶನಿವಾರ, 24 ಅಕ್ಟೋಬರ್ 2026

Namma Metro : ಫೆ. 9 ರಿಂದ ಮೆಟ್ರೋ ಟೆಕೆಟ್ ನೂತನ ದರ ಜಾರಿ

 

Namma Metro : ಕಳೆದ ವರ್ಷ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಿ ನಾಗರಿಕರಿಗೆ ದುಬಾರಿ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್‌ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಏನುತನ ಟಿಕೆಟ್ ಏರಿಕೆ ದರವು ಫೆಬ್ರವರಿ 9 ರಿಂದಲೇ ಜಾರಿ ಬರುವುದಾಗಿ ತಿಳಿಸಿದೆ.

ಹೌದು, ಕಳೆದ 7.5 ವರ್ಷಗಳ ಬಳಿಕ ಮೊದಲ ಬಾರಿಗೆ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏಕಾಏಕಿ ಭಾರೀ ದರ ಏರಿಕೆ ತಪ್ಪಿಸುವ ಉದ್ದೇಶದಿಂದ ಪ್ರತಿವರ್ಷ ‘ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ’ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಇನ್ನೂ ಕಳೆದ 7.5 ವರ್ಷಗಳ ಬಳಿಕ ಮೊದಲ ಬಾರಿಗೆ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏಕಾಏಕಿ ಭಾರೀ ದರ ಏರಿಕೆ ತಪ್ಪಿಸುವ ಉದ್ದೇಶದಿಂದ ಪ್ರತಿವರ್ಷ ‘ಸ್ವಯಂಚಾಲಿತ ದರ ಪರಿಷ್ಕರಣೆ ವ್ಯವಸ್ಥೆ’ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಯಾವ ಮಾರ್ಗದಲ್ಲಿ ಎಷ್ಟು ದರ ಹೆಚ್ಚಳ?

ನೇರಳೆ ಮಾರ್ಗದ ವೈಟ್ ಫೀಲ್ಡ್ – ಚಲ್ಲಘಟ್ಟವರೆಗೆ ಹಾಗೂ ಹಸಿರು ಮಾರ್ಗದ ರೇಷ್ಮೆ ಸಂಸ್ಥೆ – ಮಾದಾವಾರವರೆಗೆ ಪ್ರಸ್ತುತ ದರ ₹90 ಇದೆ. ಶೇ.5 ಹೆಚ್ಚಳ ಬಳಿಕ ₹95 ಆಗಲಿದೆ. ನೂತನ ಆರ್.ವಿ. ರಸ್ತೆ – ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಸ್ತುತ ₹60 ಇದೆ. ಶೇ.5 ಹೆಚ್ಚಳ ಬಳಿಕ ₹63 ಆಗಲಿದೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಕನಿಷ್ಠ ದರ ₹10 ಇದ್ದು, ಶೇ.5 ಏರಿಕೆ ಬಳಿಕ 11 ರುಪಾಯಿ ಆಗಲಿದೆ ಎಂಬುದು ಪ್ರಾಥಮಿಕ ಲೆಕ್ಕಾಚಾರ.