ಶನಿವಾರ, 24 ಅಕ್ಟೋಬರ್ 2026

ನಾಯಿ ದಾಳಿಯಿಂದಾಗಿ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಗು ಸಾವು- ಹತಾಶೆಗೊಂಡ ತಾಯಿಯಿಂದ ರಸ್ತೆಯಲ್ಲಿ ಮಲಗಿದ್ದ ನಾಯಿಗೆ ಗುಂಡು!

ನಾಯಿ ದಾಳಿಯಿಂದಾಗಿ ಮಗಳು ಸಾವನ್ನಪ್ಪಿದಳು ಎಂದು ತೀವ್ರವಾಗಿ ನೊಂದ ಮಹಿಳೆಯೊಬ್ಬರು ಬಂದೂಕು ಹಿಡಿದು ಬೀದಿನಾಯಿಯನ್ನು ಕೊಂದಿರುವ ಘಟನೆಯೊಂದು ನಡೆದಿದೆ.

ತಾಯಿ ಹೇಳುವ ಪ್ರಕಾರ ‘ಸುಮಾರು ಒಂದು ತಿಂಗಳ ಹಿಂದೆ ನನ್ನ ಮಗಳ ಮೇಲೆ ನಾಯಿ ದಾಳಿ ಮಾರಣಾಂತಿಕವಾಗಿ ದಾಳಿ ಮಾಡಿತ್ತು. ಅವಳನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಮಗು ಉಳಿಯಲಿಲ್ಲ. ಈ ಕಾರಣದಿಂದಾಗಿ ತನ್ನ ಮಗಳ ಮೇಲೆ ದಾಳಿ ಮಾಡಿದ್ದರಿಂದ ರಸ್ತೆಯಲ್ಲಿ ಮಲಗಿದ್ದ ನಾಯಿಗೆ ಗುಂಡು ಹಾರಿಸಿದೆ’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಈ ಘಟನೆ ಲೆಬನಾನ್ ನ ಪಶ್ಚಿಮ ಬೊಕ್ಕದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ