Home » ಮೂಡುಬಿದಿರೆಯಲ್ಲಿ ಬ್ರೇಕ್ ಫೇಲ್‌ ಆಗಿ ಅಂಗಡಿಗೆ ನುಗ್ಗಿದ ಲಾರಿ

ಮೂಡುಬಿದಿರೆಯಲ್ಲಿ ಬ್ರೇಕ್ ಫೇಲ್‌ ಆಗಿ ಅಂಗಡಿಗೆ ನುಗ್ಗಿದ ಲಾರಿ

0 comments

ಮೂಡುಬಿದಿರೆ: ಮೂಡುಬಿದಿರೆ ಸಮೀಪದ ತೋಡಾರು ಕೊಡಮಣಿತ್ತಾಯ ದ್ವಾರದ ಬಳಿ ಲಾರಿಯೊಂದು ಬ್ರೇಕ್ ಫೇಲ್ ಆಗಿ ಹಿಮ್ಮುಖವಾಗಿ ಚಲಿಸಿ ಅಂಗಡಿಯ ಅಂಗಳಕ್ಕೆ ನುಗ್ಗಿದ ಘಟನೆ ಭಾನುವಾರ ನಡೆದಿದೆ.
ಯೆನೆಪೋಯ ಕಾಲೇಜಿನ ಗೇಟ್‌ನಿಂದ ಹೊರಬಂದು ಮೇಲಿನ ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ಲಾರಿಯ ಬ್ರೇಕ್ ಫೇಲ್ ಆಗಿದೆ ಎನ್ನಲಾಗಿದೆ. ಪರಿಣಾಮ ಲಾರಿ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಿ ಸಮೀಪದಲ್ಲಿದ್ದ ಅಂಗಡಿಯ ಅಂಗಳದ ಮೇಲೆ ಬಿದ್ದಿದೆ. ಘಟನೆಯಿಂದ ಅಂಗಡಿಗೆ ಹಾನಿಯಾಗಿದೆ

You may also like