ಶುಕ್ರವಾರ, 6 ನವೆಂಬರ್ 2026

ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ ಶಾಸಕ ಎಕೆಎಂ ಅಶ್ರಫ್

Advertisement
Advertisement

ಕೇರಳ ವಿಧಾನಸಭೆಯ ಅಧಿವೇಶನ ಗುರುವಾರ(ಮೇ 21) ಆರಂಭಗೊಂಡಿದ್ದು, ಈ ವೇಳೆ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ (A.K.M. Ashraf) ಅವರು ಕನ್ನಡ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇಡೀ ಕನ್ನಡಿಗರ ಮನ ಗೆದ್ದಿದ್ದಾರೆ.

Sponsored

‘ಎಕೆಎಂ ಅಶ್ರಫ್ ಎಂಬವನಾದ ನಾನು ವಿಧಾನಸಭೆಯ ಸದಸ್ಯನಾಗಿ ಚುನಾಯಿತನಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶೃದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು, ನಾನು ಕೈಗೊಳ್ಳಲಿರುವ ಕರ್ತವ್ಯವನ್ನು ಶೃದ್ದಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ಸೃಷ್ಟಿಕರ್ತನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಕನ್ನಡದಲ್ಲೇ ಪ್ರಮಾಣ ವಚನವನ್ನು ಸ್ವೀಕರಿಸಿದರು. ಅವರು ಪ್ರಮಾಣವಚನ ಸ್ವೀಕಾರದ ವಿಡಿಯೊವನ್ನು ಯುಡಿಎಫ್ ಶಾಸಕ ಅಶ್ರಫ್, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 

Advertisement
Advertisement

ಬಳಿಕ ಮಾತನಾಡಿದ ಅವರು ಜನರಪರ ಕಾಳಜಿ ಮತ್ತು ನಿರೀಕ್ಷೆಗಳ ಸಾಕ್ಷಾತ್ಕಾರದ ಸಂಕಲ್ಪದೊಂದಿಗೆ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ಹದಿನಾರನೇ ಕೇರಳ ವಿಧಾನಸಭೆಯ ಸದಸ್ಯನಾಗಿ ಇಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡೆ ಎಂದು ತಿಳಿಸಿದ್ದಾರೆ.

Advertisement
Advertisement
Advertisement