ಮೆಟಾ ಸಂಸ್ಥೆಯು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಮುಖ ಬದಲಾವಣೆಗಳ ಸರಣಿಯನ್ನು ಸಿದ್ಧಪಡಿಸುತ್ತಿದ್ದು, ಟೈಮ್ ಲಿಮಿಟ್ಸ್ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
Sponsoredಹದಿಹರೆಯದವರು ಪ್ಲಾಟ್‌ಫಾರ್ಮ್‌ಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಈ ಬಿಗಿಯಾದ ನಿಯಂತ್ರಣವನ್ನು ನೀಡುವ ಗುರಿಯನ್ನು ಹೊಂದಿದೆ. ಹೊಸ ನಿಯಮಗಳ ಅಡಿಯಲ್ಲಿ, ಹದಿಹರೆಯದವರು ಅರ್ಥಾತ್ 18 ವರ್ಷ ವಯಸ್ಸಿನ ಒಳಗಿನವರು, ಈ ಎರಡೂ ಅಪ್ಲಿಕೇಶನ್‌ಗಳಲ್ಲಿ ಕಳೆಯುವ ಸಮಯದ ಮೇಲೆ ಕಠಿಣ ಮಿತಿಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು ಎಂದು ಮೆಟಾ ಹೇಳಿದೆ.
ಹೊಸ ನಿಯಮದ ಪ್ರಕಾರ ಹದಿಹರೆಯದವರು ಇನ್ನುಮುಂದೆ ಪ್ರತಿದಿನ ಎರಡು ಗಂಟೆಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆಗೆ ಮಾಡಬೇಕಾಗುತ್ತದೆ. ಬೇಕಾದರೆ ಪೋಷಕರು ಸೆಟ್ಟಿಂಗ್‌ಗಳ ಮೂಲಕ ಪೋಷಕರು ಹೆಚ್ಚುವರಿ ಬಳಕೆಯನ್ನು ಅನುಮತಿಸಬಹುದು. ಅಪ್ಲಿಕೇಶನ್‌ಗಳು ಮಧ್ಯರಾತ್ರಿಯಿಂದ ಬೆಳಿಗ್ಗೆ 6 ರವರೆಗೆ ಸ್ವಯಂಚಾಲಿತವಾಗಿ ಪ್ರವೇಶವನ್ನು ನಿರ್ಬಂಧಿಸುತ್ತವೆ. ಶಾಲಾ ಶಾಲಾ ಸಮಯದಲ್ಲಿ, ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ಮತ್ತಷ್ಟು ಸೈಲೆಂಟ್ ಮಾಡಲಿದೆ. 18 ವರ್ಷದೊಳಗಿನ ಬಳಕೆದಾರರು ಅಪ್ಲಿಕೇಶನ್‌ಗಳನ್ನು ದೀರ್ಘಕಾಲದವರೆಗೆ ಬಳಸುವಾಗ ಪ್ರಾಂಪ್ಟ್‌ಗಳನ್ನು ಸ್ವೀಕರಿಸುತ್ತಾರೆ. ಈ ಬದಲಾವಣೆಯ ನಂತರ, ಈ ಅಪ್ಲಿಕೇಶನ್‌ಗಳನ್ನು ರಾತ್ರಿಯಲ್ಲಿ ಬಳಸಲು ಸಾಧ್ಯವಾಗುವುದಿಲ್ಲ ಮತ್ತು ಹಗಲಿನಲ್ಲಿ ಎರಡು ಗಂಟೆಗಳ ಮಿತಿಯನ್ನು ನಿಗದಿಪಡಿಸಬಹುದು. ಈ ನಿರ್ಧಾರವು ಹದಿಹರೆಯದವರ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ.




