ಭಾನುವಾರ, 25 ಅಕ್ಟೋಬರ್ 2026
Trending

ಸಿಎಂ ಯೋಗಿ ತಾಯಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಮೌಲಾನ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ತಾಯಿಯ ವಿರುದ್ಧ ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವ ಮೌಲಾನಾ ಅಬ್ದುಲ್ಲಾ ಸಲೀಂ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷರು ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಉತ್ತರಪ್ರದೇಶಾದ್ಯಂತ ಸುಮಾರು 83 ಪೊಲೀಸ್‌ ಠಾಣೆಗಳಲ್ಲಿ ಮೌಲಾನಾ ವಿರುದ್ಧ ದೂರುಗಳು ಸಲ್ಲಿಕೆಯಾಗಿದೆ.

Sponsored

ʼಯೋಗಿಜಿಯ ತಾಯಿಯ ಅವಮಾನವನ್ನು ಹಿಂದೂ ಸಮಾಜ ಸಹಿಸುವುದಿಲ್ಲʼ ಎಂದು ಬರಹವಿರುವ ಬೃಹತ್‌ ಹೋರ್ಡಿಂಗ್‌ಗಳನ್ನು ರಾಜಧಾನಿ ಲಕ್ನೋದ ಹಜರತ್‌ಗಂಜ್‌ ಸೇರಿ ಪ್ರಮುಖ ಸ್ಥಳಗಳಲ್ಲಿ ಹಾಕಲಾಗಿದೆ. ಮೌಲಾನಾ ವಿರುದ್ಧ ನೂರಾರು ಯುವಕರು ಅಟಲ್‌ ಚೌಕ್‌ನಲ್ಲಿ ಜಮಾಯಿಸಿದ್ದು ಆತನ ಪ್ರತಿಕೃತಿ ದಹಿಸಿ ಆಕ್ರೊಶ ವ್ಯಕ್ತಪಡಿಸಿದರು.

ಪೊಲೀಸರು ಮೌಲಾನನನ್ನು ಕೂಡಲೇ ಬಂಧನ ಮಾಡದಿದ್ದರೆ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.