Food: ಆಹಾರ (Food) ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಹಾರ ಪರವಾನಗಿ ಪಡೆದಿರುವ ತಯಾರಕರು/ರೀ-ಪ್ಯಾಕರ್/ ರೀ-ಲೇಬರ್ ಪ್ರತಿ ವರ್ಷ ತಮ್ಮ ವಾರ್ಷಿಕ ವಹಿವಾಟಿನ ವಿವರವನ್ನು 2025 ರ ಮೇ-31 ರ ಕಾಲಮಿತಿಯೊಳಗೆ https:\\foscos.fssai.gov.in ವೆಬ್ಸೈಟ್ನಲ್ಲಿ ತಪ್ಪದೇ ಸಲ್ಲಿಸುವುದು. ತಪ್ಪಿದ್ದಲ್ಲಿ ವಾರ್ಷಿಕವಾಗಿ ಕಾಯ್ದೆಯಡಿ ನಿಗಧಿಯಾಗುವ ದಂಡವನ್ನು (ರೂ.15000) ಕಡ್ಡಾಯವಾಗಿ ಪಾವತಿಸಿದ ನಂತರವೇ ಪರವಾನಗಿ ನವೀಕರಿಸಲು ಅವಕಾಶವಿರುತ್ತದೆ.
Sponsoredತಯಾರಕರು/ರೀ-ಪ್ಯಾಕರ್/ರೀ-ಲೇಬರ್ದಾರರು ತಮ್ಮ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯನ್ನು ಪ್ರತಿ 06 ತಿಂಗಳಿಗೊಮ್ಮ ಎನ್ಎಬಿಎಲ್ ಅಕ್ರಿಡಿಯೇಟೆಡ್ ಎಫ್ಎಸ್ಎಸ್ಎಐ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂರ್ತಜಾಲ ತಾಣದಲ್ಲಿ ತಮ್ಮ ತಮ್ಮ ಲಾಗಿನ್ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
Marriage AdSponsoredಈ ರೀತಿಯಲ್ಲಿ ವಾರ್ಷಿಕ ವಹಿವಾಟಿನ ವಿವರವನ್ನು ಹಾಗೂ ಪ್ರಯೋಗಾಲಯದ ವಿಶ್ಲೇಷಿಸಿ ವರದಿಯನ್ನು ಸಲ್ಲಿಸಲು ವಿಫಲವಾದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ತಯಾರಕರು/ರೀ-ಪ್ಯಾಕರ್/ರೀ-ಲೇಬರ್ ಆಹಾರ ಉದ್ಧಿಮೆದಾರರು ಜವಾಬ್ದಾರರಾಗುತ್ತಾರೆ.
ಆಹಾರ ನೋಂದಣಿ/ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟಿಸ್ ಮತ್ತು ದಂಡವನ್ನು ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ.ಇ.ಅನಿಲ್ ಧಾವನ್ ಅವರು ತಿಳಿಸಿದ್ದಾರೆ.




