ಶನಿವಾರ, 24 ಅಕ್ಟೋಬರ್ 2026

ಮಂಗಳೂರು: ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ

ಮಂಗಳೂರು: ನಗರದ ಪಾಂಡೇಶ್ವರ ನ್ಯೂ ರೋಡ್‌ ನಿವಾಸಿ ಶರ್ಮಿಳಾ (30) ಅವರು ನಾಪತ್ತೆಯಾಗಿರುವ ಕುರಿತು ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.30 ರಂದು ಬೆಳಗ್ಗೆ 9 ಗಂಟೆಗೆ ಮನೆಯಿಂದ ಕಚೇರಿಗೆ ತೆರಳಿದ್ದ ಶರ್ಮಿಳಾ ಅವರು ನಂತರ ಮನೆಗೆ ಮರಳಿಲ್ಲ ಎಂದು ವರದಿಯಾಗಿದೆ. ಸಂಬಂಧಿಕರು, ಪರಿಚಿತರಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರ ಪತಿ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ.

ದೂರಿನ ಮೇರೆಗೆ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ಶರ್ಮಿಲಾ ಪತ್ತೆಗೆ ತನಿಖೆಗೆ ಮುಂದುವರಿಸಿದ್ದಾರೆ.